ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಕಾಳಜಿ ಇಲ್ಲದವರು

Last Updated 5 ಏಪ್ರಿಲ್ 2020, 21:33 IST
ಅಕ್ಷರ ಗಾತ್ರ

ಲಾಕ್‌ಡೌನ್‌ ಇರುವುದನ್ನು ಲೆಕ್ಕಿಸದೆ ನಟಿ ಶರ್ಮಿಳಾ ಮಾಂಡ್ರೆ ಅವರು ಕಾರಿನಲ್ಲಿ ಸ್ನೇಹಿತರೊಟ್ಟಿಗೆ ಜಾಲಿ ರೈಡ್ ನಡೆಸಿರುವುದು ದುರದೃಷ್ಟಕರ (ಪ್ರ.ವಾ., ಏ. 5). ಇಂತಹ ಜನರಿಂದಾಗಿ ಸಮಾಜದ ಸ್ವಾಸ್ಥ್ಯ ಹದಗೆಡುತ್ತದೆ.

ಸಮಾಜದ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದೆ, ಕಾಯ್ದೆ, ಕಾನೂನು, ಆದೇಶಗಳು ತಮ್ಮಂತಹವರಿಗಲ್ಲ ಎಂದುಕೊಂಡು ಬೀದಿಗಿಳಿಯುವ ಇಂತಹವರಿಗೆ ಸರ್ಕಾರ ಕ್ಷಮೆ ತೋರಬಾರದು. ಚಲನಚಿತ್ರರಂಗದ ಪ್ರಮುಖರು ಹಾಗೂ ರಾಜಕಾರಣಿಗಳು ಈ ವಿಷಯದಲ್ಲಿ ಮೂಗು ತೂರಿಸದೆ, ಪೊಲೀಸರು ಸೂಕ್ತ ಕಾನೂನು ಕ್ರಮ ಜರುಗಿಸಲು ಸಹಕರಿಸಬೇಕು. ಹಾಗಾದಲ್ಲಿ ಮಾತ್ರ ಇಂತಹ ಹುಚ್ಚುತನಗಳು ಮರುಕಳಿಸದಂತೆ ಮಾಡಬಹುದು.

ರಮೇಶ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT