ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವರಂತೆಯೇ ಒದ್ದಾಡಿದವರು

Last Updated 11 ಜೂನ್ 2020, 20:56 IST
ಅಕ್ಷರ ಗಾತ್ರ

ಕೊರೊನಾದ ಪ್ರಮುಖ ಪರಿಣಾಮ ಎಂದರೆ, ಮಾರುಕಟ್ಟೆಯಲ್ಲಿ ಎಲ್ಲಾ ವಸ್ತುಗಳ ಬೆಲೆ ಒಂದಕ್ಕೆ ಎರಡರಷ್ಟು ಜಾಸ್ತಿಯಾಗಿರುವುದು. ಕ್ಷೌರಕ್ಕೆ ಹೋದರೆ ₹ 70 ಕೊಡುತ್ತಿದ್ದ ಜಾಗದಲ್ಲಿ ₹ 90 ಕೊಡಬೇಕಾಗಿದೆ.

ಕೇಳಿದರೆ ‘ಕೊರೊನಾ ಸರ್. ಮೂರು ತಿಂಗಳು ಸೋತುಹೋಗಿದ್ದೇವೆ’ ಎನ್ನುತ್ತಾರೆ. ತರಕಾರಿ, ಚಿಕನ್ ಎಲ್ಲದರ ಬೆಲೆಯೂ ಜಾಸ್ತಿ. ಆದರೆ ಅವರಂತೆಯೇ ನಾವೂ ಇಷ್ಟು ದಿನ ಸಂಬಳ– ಸಾರಿಗೆ ಇಲ್ಲದೆ ಒದ್ದಾಡಿದವರೇ ಎಂದು ಅವರೇಕೆ ತಿಳಿಯುವುದಿಲ್ಲ.

ಕಿಲೊಗೆ ₹ 110 ಇದ್ದ ಚಿಕನ್ ಬೆಲೆ ಈಗ ₹ 170ಕ್ಕೆ ಏರಿದೆ. ಅಂದರೆ ಒಂದೇ ಬಾರಿಗೆ 3 ತಿಂಗಳ ಅರಿಯರ್ಸ್, ಅಂದರೆ ಸರ್ಕಾರವು ನೌಕರರಿಗೆ ಕೊಡುವ ತುಟ್ಟಿಭತ್ಯೆಯಂತೆ ಆಯಿತಲ್ಲ. ಈ ರೀತಿಯ ಹಗಲು ದರೋಡೆ ಸರಿಯೇ?

-ಬಾಲಕೃಷ್ಣ ಎಂ.ಆರ್.,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT