ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿಪ್ರಾಯಕ್ಕೆ ಬಂಧನದ ಹಂಗು ಬೇಡ

Last Updated 15 ಫೆಬ್ರುವರಿ 2021, 18:59 IST
ಅಕ್ಷರ ಗಾತ್ರ

‘ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ಕಡಿವಾಣವಿಲ್ಲದ ಕುದುರೆಯಂತಾಗಿದೆ’ ಎಂದು ಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮಠ ಹೇಳಿದ್ದಾರೆ (ವಾ.ವಾ., ಫೆ. 13). ಅವರ ಪ್ರಕಾರ, ಅಭಿವ್ಯಕ್ತಿ ಸ್ವಾತಂತ್ರ್ಯವು ಇನ್ನೊಬ್ಬರ ಭಾವನೆಗಳಿಗೆ ಭಂಗ ತರಬಾರದು. ಆದರೆ ಅಭಿಪ್ರಾಯಗಳು, ಭಾವನೆಗಳ ಅಥವಾ ನಂಬಿಕೆಗಳ ಬಂಧನಕ್ಕೆ ಒಳಪಟ್ಟರೆ ಅವುಗಳನ್ನು ಮುಕ್ತ ಅಭಿಪ್ರಾಯಗಳೆನ್ನಲಾಗದು. ಭಾವನೆಗಳಿಗೆ ನೋವುಂಟಾಗಬಾರದು ಎನ್ನುವುದೇ ಮುಖ್ಯವಾಗಿದ್ದರೆ ಪ್ರಾಯಶಃ ವಚನಗಳ ಸೃಷ್ಟಿಯಾಗುತ್ತಿರಲಿಲ್ಲ. ಬ್ರಹ್ಮಸಮಾಜ ದಂತಹ ಸಮಾಜ ಸುಧಾರಣಾ ಚಳವಳಿಗಳು ಸಾಧ್ಯವಾಗುತ್ತಿರಲಿಲ್ಲ. ಮಧ್ಯಯುಗದ ಅಂತ್ಯದಲ್ಲಿ ಸಂಪ್ರದಾಯವಾದಿ ಕ್ರಿಶ್ಚಿಯನ್ ನಂಬಿಕೆಗಳನ್ನು ಪ್ರಶ್ನಿಸಲು ಸಾಧ್ಯವಾದದ್ದು ಯುರೋಪ್ ಕತ್ತಲ ಯುಗದಿಂದ ಮರಳಲು ಕಾರಣ ವಾಯಿತು.

ಅಭಿಪ್ರಾಯಗಳು ತಪ್ಪಾಗಿರಬಹುದು, ಆದರೆ ಪ್ರಜ್ಞಾವಂತ ಸಮಾಜಗಳು ಅದನ್ನು ಮಂಡಿಸಲು ಮುಕ್ತ ಅವಕಾಶವನ್ನು ನೀಡುತ್ತವೆ. ಇಂತಹ ಸಮಾಜಗಳು ಸತ್ಯದಿಂದ ಸುಳ್ಳನ್ನು ಬೇರ್ಪಡಿಸಲು, ಪ್ರಚೋದನೆಗಳನ್ನು ತಿರಸ್ಕರಿಸಲು ಸಶಕ್ತವಾಗಿರುತ್ತವೆ. ಇಂದು ಅಭಿಪ್ರಾಯಗಳು ಹಿಂಸೆಗೆ ಕಾರಣವಾಗುತ್ತಿದ್ದರೆ, ಅಭಿಪ್ರಾಯ ವ್ಯಕ್ತಪಡಿಸಿದ ವ್ಯಕ್ತಿ ಬಂಧನಕ್ಕೆ ಒಳಗಾಗುತ್ತಿದ್ದರೆ ನಾವು ಕಳವಳಗೊಳ್ಳಬೇಕಿರುವುದು ಸಮಾಜ ಸಾಗುತ್ತಿರುವ ದಿಕ್ಕಿನ ಬಗ್ಗೆ.
-ಸುನೀಲ ನಾಯಕ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT