ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷಾ ಶುಲ್ಕ ಏರಿಕೆ ಖಂಡನೀಯ

Last Updated 16 ಫೆಬ್ರುವರಿ 2021, 22:31 IST
ಅಕ್ಷರ ಗಾತ್ರ

ಮೈಸೂರು ವಿಶ್ವವಿದ್ಯಾಲಯವು ಕೆ– ಸೆಟ್ ಪರೀಕ್ಷೆ ನಡೆಸಲು ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ. ಆದರೆ ಪರೀಕ್ಷಾ ಶುಲ್ಕದಲ್ಲಿ ಏರಿಕೆ ಕಂಡಿರುವುದು ಪರೀಕ್ಷಾರ್ಥಿಗಳಿಗೆ ಬೇಸರ ತಂದಿದೆ.

ಮೊದಲೇ ಕೊರೊನಾ ಸಾಂಕ್ರಾಮಿಕದ ಕಾರಣದಿಂದ ಜನರು ಕೆಲಸವಿಲ್ಲದೆ ಪರಿತಪಿಸುತ್ತಿರುವಾಗ ಈ ನಡೆ ಖಂಡನೀಯ. ಇದರಂತೆಯೇ ಎನ್‌ಟಿಎಯು ಪರೀಕ್ಷೆಯನ್ನು ನಡೆಸುತ್ತದೆ. ಆದರೆ ಅದರಲ್ಲಿ ಶುಲ್ಕದ ಯಾವುದೇ ವ್ಯತ್ಯಾಸ ಕಂಡಿಲ್ಲ.

ಕೆ– ಸೆಟ್ ಪರೀಕ್ಷಾ ಶುಲ್ಕ ಏರಿಕೆಯಿಂದ ಎಷ್ಟೋ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸುವ ಆಸಕ್ತಿ ಕುಂದಿದೆ. ಉನ್ನತ ಶಿಕ್ಷಣ ಇಲಾಖೆ ಕೂಡಲೇ ಇತ್ತ ಗಮನಹರಿಸಿ ಶುಲ್ಕದ ಹೊರೆಯನ್ನು ಇಳಿಸಬೇಕು.
-ಜೆ.ಚಂದ್ರಶೇಖರ,ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT