ಸೋಮವಾರ, ನವೆಂಬರ್ 29, 2021
20 °C

ಪಿಸುಮಾತು: ಪುಕ್ಕಟೆ ಮನರಂಜನೆ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ರಾಜಕಾರಣಿಗಳಿಬ್ಬರ ಮಧ್ಯದ ಪಿಸುಮಾತು ನಿರೀಕ್ಷೆಯಂತೆ ರಾಜಕೀಯ ಕೋಲಾಹಲವನ್ನು ಸೃಷ್ಟಿಸಿದೆ. ವಾಸ್ತವದಲ್ಲಿ ಈ ಮಾತಿನಲ್ಲಿ ಅಂತಹ ವಿಶೇಷ ಏನೂ ಇಲ್ಲ. ಇದನ್ನು ದಿನನಿತ್ಯದ ಜೀವನದಲ್ಲಿ ಬಹುಶಃ ಪ್ರತಿಯೊಬ್ಬರೂ ಕೇಳಿರುತ್ತಾರೆ, ಚರ್ಚಿಸಿರುತ್ತಾರೆ ಮತ್ತು ಅಬ್ಬಾ ಎಂದು ಆಶ್ಚರ್ಯಪಟ್ಟಿರುತ್ತಾರೆ. ತಂತ್ರಜ್ಞಾನದ ಆವಿಷ್ಕಾರಗಳು ಗೋಪ್ಯತೆಯನ್ನು ನೇಪಥ್ಯಕ್ಕೆ ಸೇರಿಸಿರುವಾಗ, ಪರಸ್ಪರ  ಗೋಪ್ಯವಾಗಿ ಮಾತನಾಡಿಕೊಳ್ಳುವವರು ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗುತ್ತದೆ. ಆಡಿಯೊ ಮತ್ತು ವಿಡಿಯೊ ಲೀಕ್‌ನಲ್ಲಿ ಕೆಲವರ ರಾಜಕೀಯ ಭವಿಷ್ಯವೇ ನೆಲಕಚ್ಚಿರುವ ಉದಾಹರಣೆಗಳು ಇನ್ನೂ ಕಣ್ಮುಂದೆ ಇರುವಾಗ ಈ ರಾಜಕಾರಣಿಗಳು ಇದನ್ನು ತಿಳಿಯದೇ ಹೋದದ್ದು ದುರ್ದೈವ. ಸಾರ್ವಜನಿಕರ ನೆನಪಿನ ಶಕ್ತಿ ಕ್ಷೀಣವಾಗಿರುತ್ತದೆ. ಈ ಘಟನೆ ಮತ್ತು ಹೇಳಿಕೆ ಯಾವ ವ್ಯತ್ಯಾಸವನ್ನೂ ಉಂಟು ಮಾಡುವುದಿಲ್ಲ. ಕೆಲವು ದಿನ ಮಾಧ್ಯಮದಲ್ಲಿ ಮಿಂಚಿ ಅಷ್ಟೇ ವೇಗದಲ್ಲಿ ಮಾಯವಾಗುತ್ತದೆ. ಸಾರ್ವಜನಿಕರಿಗೆ ಪುಕ್ಕಟೆ ಮನರಂಜನೆ ದೊರಕುತ್ತದೆ ಅಷ್ಟೇ.

- ರಮಾನಂದ ಶರ್ಮಾ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು