ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರೋತ್ಸವ: ಯಾರಿಗೆ ಬೇಕಾಗಿದೆ?

ಅಕ್ಷರ ಗಾತ್ರ

‘ಫೆಬ್ರುವರಿ ಕೊನೆಗೆ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ?’ ವರದಿ (ಪ್ರ.ವಾ., ಜ. 21) ಓದಿದಾಗ ಮೂಡಿದ ಪ್ರಶ್ನೆಯೆಂದರೆ, ‘ಈಗ ಸಿನಿಮಾ, ಸಿನಿಮೋತ್ಸವ ಯಾರಿಗೆ ಬೇಕಾಗಿದೆ?’ ‘ಏನಾದೀತು ಎಂಬ ಕುತೂಹಲ, ನಿರೀಕ್ಷೆ’ ಎಲ್ಲ ಕಲ್ಪಿತ– ಉತ್ಪ್ರೇಕ್ಷಿತ. ವಾಸ್ತವ ಎಂದರೆ, ಇಫಿ ಗೋವಾ ಹಾಗೂ ಕೋಲ್ಕತ್ತ ಚಿತ್ರೋತ್ಸವಗಳೆರಡೂ ಬಂದು ಹೋಗಿವೆಯಷ್ಟೆ. ಸಿನಿಮಾ ಅಕಾಡೆಮಿ ಅಧ್ಯಕ್ಷರು ಈ ಸಿನಿಮೋತ್ಸವದ ಕ್ರಿಯೇಟಿವ್ ಡೈರೆಕ್ಟರ್ ಹೇಳಬೇಕಾದು ದನ್ನು ಬಹಳ ಮುಂಚಿತವಾಗಿ ರಾಜಕಾರಣಿ ಶೈಲಿಯಲ್ಲಿ ಹೇಳಿಬಿಟ್ಟಿದ್ದಾರೆ (ಅವರು ‘ಐಸೊಲೇಶನ್‌’ನಿಂದ ಈಗಷ್ಟೇ ಹೊರ ಬಂದಿರಬೇಕು).

ಸಿದ್ಧತೆ- ವಿವಿಧ ಸಮಿತಿಗಳು ಘಟಿತವಾಗಿದ್ದರೆ ಅದನ್ನು ಬಹಿರಂಗಪಡಿಸಬೇಕಾಗುತ್ತದೆ (ವೆಬ್‌ಸೈಟ್‌ನಲ್ಲಾದರೂ ಹಾಕಲಿ). ಅರ್ಜಿಗಳು ಎಂದರೇನು? ಸಿನಿಮಾಗಳ ಎಂಟ್ರಿಗಳು (ಪ್ರವೇಶ) ಎಂದಾದರೆ ಅಂತಿಮ ದಿನಾಂಕ ಫ್ರೀಝ್ ಆಯಿತೆ? ಚಿತ್ರೋದ್ಯಮ, ಪ್ರದರ್ಶಕರಿಗಿಂತ ವೀಕ್ಷಕರು ಮುಖ್ಯ. ಶೇ 50 ನಿಯಮ ಇರುವವರೆಗೆ ಈಗಿನ ಜಾಗದಲ್ಲಿ ಅದನ್ನು ನಡೆಸುವುದೇ ಸರಿಯಾಗಲಾರದು. ಇಲ್ಲಿನವರೆಗೆ ಬಿಫೆಸ್ ಬಗೆಗಿನ ಮುಖ್ಯ ಸಮಸ್ಯೆಯೆಂದರೆ, ಆಯೋಜನೆಯ ನಡಾವಳಿಗಳು ಪಾರದರ್ಶಕವಾಗಿಲ್ಲ. ಅಕಾಡೆಮಿ, ವಾರ್ತಾ ಇಲಾಖೆ, ಕೆಲವೇ ಪ್ರಭಾವಿ ವ್ಯಕ್ತಿಗಳ ಮುಷ್ಟಿಯಿಂದ ಚಿತ್ರೋತ್ಸವವನ್ನು ಮುಕ್ತಗೊಳಿಸಬೇಕೆಂಬ ಇಚ್ಛಾಶಕ್ತಿ ಮುಖ್ಯಮಂತ್ರಿಯವರಲ್ಲಿ ಇದ್ದರೆ, ಸ್ವಲ್ಪ ತಡ ವಾದರೂ ಚಿಂತೆಯಿಲ್ಲ, ಡಿಎಫ್ಎಫ್ ಮಾದರಿಯ ನಿರ್ದೇಶನಾಲಯವನ್ನು ಸ್ಥಾಪಿಸಿ ಅದರ ಮೂಲಕ ಚಿತ್ರೋತ್ಸವ ವನ್ನು ನಡೆಸಬೇಕು. ಕೆಲವು ಸ್ಥಾಪಿತ ಹಿತಾಸಕ್ತಿಗಳನ್ನು ನಿಯಂತ್ರಿಸಲು ಇದು ಒಂದು ಮಾರ್ಗ ಆದೀತು. ಒಟ್ಟಿನಲ್ಲಿ ಕೋವಿಡ್ ಹತೋಟಿಗೆ ಬರದೆ ದಿನಾಂಕಗಳನ್ನು ಪ್ರಕಟಿಸುವುದೇ ವಿವೇಕಯುತ ಅಲ್ಲ. ಆರೋಗ್ಯ ಸಚಿವರ ಅಂದಾಜನ್ನೂ ಡೆಲ್ಟಾ, ಓಮೈಕ್ರಾನ್‌ಗಳು ಮೀರಬಹುದಲ್ಲ!

- ಎಚ್.ಎಸ್.ಮಂಜುನಾಥ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT