ಯಾರ ವಿರುದ್ಧ ಹೋರಾಡಬೇಕು?
ಕೆಪಿಎಸ್‌ಸಿ ನೇಮಕಾತಿ ಅಕ್ರಮಗಳಿಗೆ ಸಂಬಂಧಿಸಿದ ಪತ್ರಿಕಾ ವರದಿಗಳನ್ನು ಓದಿದಾಗ, ಅಭ್ಯರ್ಥಿಗಳು ಎಷ್ಟು ಅಸಹಾಯಕರು ಎಂದೆನಿಸಿತು. ತಂದೆ ತಾಯಿ ‘ಇನ್ನು ನಿನ್ನ ಅಭ್ಯಾಸಕ್ಕೆ ನಮ್ಮಲ್ಲಿ ಹಣವಿಲ್ಲ ನಿಲ್ಲಿಸು’ ಎನ್ನುವರೇನೋ, ‘ಕೆಲವು ತಿಂಗಳಲ್ಲಿ ಅಧಿಸೂಚನೆ ಹೊರಡಿಸದಿದ್ದರೆ ನನ್ನ ವಯೋಮಿತಿ ಮೀರಿ ಹೋಗುವುದೇನೋ’ ಎಂಬಂತಹ ಪ್ರಶ್ನೆಗಳಿಗೆ ಉತ್ತರ ಸಿಗದೆ ಲಕ್ಷಾಂತರ ಮಂದಿ ತಳಮಳದಿಂದ ಜೀವನ ನಡೆಸುತ್ತಿದ್ದಾರೆ.
ಪಕ್ಕದ ಅನೇಕ ರಾಜ್ಯಗಳ ವಿದ್ಯಾರ್ಥಿಗಳು ಪ್ರತಿವರ್ಷ ಪರೀಕ್ಷೆ ಬರೆದು ಕೆಲಸ ಪಡೆಯುತ್ತಿದ್ದಾರೆ. ಆದರೆ ನಮಗೇಕೆ ಆ ಭಾಗ್ಯ ಇಲ್ಲ? ಇದಕ್ಕಿಂತ ದೊಡ್ಡ ದೌರ್ಭಾಗ್ಯವೆಂದರೆ, ಈ ನಮ್ಮ ಕಷ್ಟಗಳನ್ನು ಯಾರಿಗೆ ಮುಟ್ಟಿಸಬೇಕು, ಯಾರ ವಿರುದ್ಧ ಹೋರಾಡಬೇಕು ಎಂದು ತಿಳಿಯದಿರುವುದು.
- ಸುಪ್ರೀತಾ ಸಿ. ಹೆಬ್ಬೂರು, ತುಮಕೂರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.