ಶನಿವಾರ, ಮೇ 28, 2022
31 °C

ಬಜೆಟ್ ಮಂಡನೆಗೆ ಸಂಜೆಯೇ ಸೂಕ್ತ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಫೆಬ್ರುವರಿ 1ರಂದು ಕೇಂದ್ರ ಬಜೆಟ್ ಮಂಡನೆ ಇದೆ. ಇತ್ತೀಚೆಗೆ ಬಜೆಟ್ ಮಂಡನೆಯನ್ನು ಸಾರಾಸಾರ ಸವಿದ ನೆನಪೇ ಇಲ್ಲ. ಮಧ್ಯಾಹ್ನದ ಮಂಡನೆಯನ್ನು ವೀಕ್ಷಿಸಲು ಬಹಳಷ್ಟು ಆಸಕ್ತರಿಗೆ ಸಾಧ್ಯವಾಗುವುದೇ ಇಲ್ಲ. ಆಲಿಸುವ ಕಿವಿಗಳ ಕೊರತೆ ಎದ್ದುಕಾಣುತ್ತದೆ. ವಾಣಿಜ್ಯ ತೆರಿಗೆ ಇಲಾಖೆಯವರು, ಚಾರ್ಟರ್ಡ್ ಅಕೌಂಟೆಂಟ್, ತೆರಿಗೆ ಸಲಹೆಗಾರರು... ಹೀಗೆ ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ಮಗ್ನರಾಗಿರುತ್ತಾರೆ. ಅಗತ್ಯವಾಗಿ ಆಲಿಸಬೇಕಾದವರಿಗೇ ಆಲಿಸಲು ಇದರಿಂದ ಸಾಧ್ಯವಾಗುವುದಿಲ್ಲ. ಏನಿದ್ದರೂ ಟಿ.ವಿ. ವಾಹಿನಿಗಳು ಆಮೇಲೆ ಕೊಡುವ ತುಂಡು ತುಂಡು ಸುದ್ದಿಗಳಿಗಷ್ಟೇ ತೃಪ್ತಗೊಳ್ಳಬೇಕು.

ಸಂಜೆ ಹೊತ್ತಲ್ಲಿ ವಿರಾಮವಾಗಿ, ವಿಸ್ತೃತವಾಗಿ ವೀಕ್ಷಿಸಬಹುದು. ಬಜೆಟ್‌ ಅನ್ನು ಸಂಜೆ ಹೊತ್ತು ಮಂಡಿಸುತ್ತಿದ್ದ ಮೊದಲಿನ ಪದ್ಧತಿಯೇ ಸರಿಯಿತ್ತೇನೊ. ಎಲ್ಲವನ್ನೂ ಆಮೂಲಾಗ್ರವಾಗಿ ಬದಲಾಯಿಸಬೇಕೆನ್ನುವ ಇರಾದೆ ಹುಂಬತನವಷ್ಟೇ.

- ರಾಮಚಂದ್ರ ಎಸ್. ಕುಲಕರ್ಣಿ, ಧಾರವಾಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು