ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಚಿನಲ್ಲಿ ಸಿಲುಕಿಸಿದ ಆಶ್ವಾಸನೆ

Last Updated 16 ಜನವರಿ 2020, 18:18 IST
ಅಕ್ಷರ ಗಾತ್ರ

ಉಪಚುನಾವಣೆಯಲ್ಲಿ ಗೆದ್ದ ಶಾಸಕರು ನಿರ್ದಿಷ್ಟ ಖಾತೆಗಾಗಿ ಪಟ್ಟು ಹಿಡಿದಿರುವುದರಿಂದ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ತೊಡಕಾಗಿದೆ ಎಂದು ವರದಿಯಾಗಿದೆ (ಪ್ರ.ವಾ., ಜ. 16). ಬಿಜೆಪಿಯ ತತ್ವ–ಸಿದ್ಧಾಂತಕ್ಕೆ ನಿಷ್ಠೆಯಿಂದ ಅಲ್ಲದೆ, ಅಧಿಕಾರದ ಮಹದಾಸೆ ಹೊತ್ತ ವಲಸಿಗರಾಗಿ ಬಂದವರು ತಮ್ಮ ಮೇಲೆ ಹೀಗೆ ಸವಾರಿ ಮಾಡಬಹುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಕನಸು ಮನಸಿನಲ್ಲೂ ಯೋಚಿಸಿರಲಾರರು. ಇಂದಿನ ರಾಜಕೀಯದಲ್ಲಿ ಮಂತ್ರಿಯಾಗಲು ಅರ್ಹತೆ ಮತ್ತು ನಿರ್ದಿಷ್ಟ ಖಾತೆ ನಿರ್ವಹಿಸಲು ತಕ್ಕ ಅನುಭವವು ಮಾನದಂಡಗಳೇ ಅಲ್ಲ! ಹೀಗಿರುವಾಗ, ರಾಜಕೀಯದಲ್ಲಿ ಪಳಗಿರುವ ಯಡಿಯೂರಪ್ಪನವರಿಗೆ ಮಂತ್ರಿಮಂಡಲ ವಿಸ್ತರಿಸಲು ಸಾಧ್ಯವಾಗದಿರುವುದು ಸೋಜಿಗ ಏನಲ್ಲ. ಇದು ಸ್ವಯಂಕೃತ.

ಅತ್ತ ಇತ್ತ ಸೆಳೆತ ಎಳೆತಗಳಿಗೆ ಸಿಕ್ಕ ಅವರದು ಹತಾಶೆಯ ಸ್ಥಿತಿ. ಒಂದು ಕಡೆ ವಲಸಿಗರ ಪಟ್ಟು, ಇನ್ನೊಂದು ಕಡೆ ಪಕ್ಷದಲ್ಲಿ ತಳಮಟ್ಟದಿಂದ ಕೆಲಸ ಮಾಡಿದವರ ಕಡೆಗಣನೆ, ಈ ನಡುವೆ ಪಕ್ಷದ ಹೈಕಮಾಂಡ್ ಈ ಕುರಿತು ಮೌನ ವಹಿಸಿ ಇವರನ್ನು ಪೇಚಿನಲ್ಲಿ ಸಿಲುಕಿಸಿ ಕಾಲಯಾಪನೆ ಮಾಡುವಂತಿದೆ. ವಲಸಿಗರಿಗೆ ಮಂತ್ರಿಗಿರಿಯ ಆಶ್ವಾಸನೆ ಕೊಟ್ಟರೆ ತಾವು ಮತ್ತೆ ಮುಖ್ಯಮಂತ್ರಿ ಆಗಬಹುದು ಎಂದು ಲೆಕ್ಕಹಾಕಿ, ಅವರೆಲ್ಲರಿಗೂ ಮಾತು ಕೊಟ್ಟಿದ್ದೇ ಈಗ ಅವರಿಗೆ ಉರುಳಾಗಿ ಪರಿಣಮಿಸಿದಂತಿದೆ.

-ಸಾಮಗ ದತ್ತಾತ್ರಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT