ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸ್ತ್ರಸಂಹಿತೆ ಇರಲಿ

Last Updated 17 ಜನವರಿ 2020, 20:15 IST
ಅಕ್ಷರ ಗಾತ್ರ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಜಾರಿಗೆ ತರುವಂತೆ ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗದಳ ಆಗ್ರಹಿಸಿವೆ. ಈ ಆಲೋಚನೆ ಸರಿಯಾಗಿದೆ. ಕೇರಳ ಹಾಗೂ ಆಂಧ್ರಪ್ರದೇಶದ
ದೇವಸ್ಥಾನಗಳಲ್ಲಿ ಈಗಾಗಲೇ ವಸ್ತ್ರಸಂಹಿತೆ ಅನುಸರಿಸಲಾಗುತ್ತಿದೆ. ಮಹಿಳೆಯರಿಗೆ ಸೀರೆ, ಪುರುಷರಿಗೆ ಧೋತಿ ಮತ್ತು ಪಂಚೆಯು ಸಂಪ್ರದಾಯವನ್ನು ಉಳಿಸುತ್ತದೆ. ನಾಡಿನ ಸಂಸ್ಕೃತಿಯಾದ ದೇವಸ್ಥಾನ
ದಂತಹ ಪವಿತ್ರ ಸ್ಥಳದಲ್ಲಿ ಭಕ್ತಿಭಾವ ಹೆಚ್ಚಾಗುತ್ತದೆ. ಸಮಾನತೆ ಬೆಳೆದು ಭೇದಭಾವ ಮರೆಯಾಗುತ್ತದೆ.

ಈ ಬೇಡಿಕೆಯನ್ನು ಮತೀಯ ಹಿನ್ನೆಲೆಯಲ್ಲಿ ನೋಡದೆ, ವೈಜ್ಞಾನಿಕವಾಗಿ ನೋಡಬೇಕು. ಉತ್ತಮ ಬಟ್ಟೆ ಧರಿಸಿದರೆ ಮನಸ್ಸು ಚೆನ್ನಾಗಿರುತ್ತದೆ. ದೇವಸ್ಥಾನಕ್ಕೆ ಬರುವಾಗ ಮನಸ್ಸು ಪ್ರಶಾಂತವಾಗಿರುವುದು ಅಪೇಕ್ಷಣೀಯ. ಜೀನ್ಸ್ಬಟ್ಟೆಗಳು ದೇಹವನ್ನು ಹಗುರವಾಗಿ ಇರಿಸಲು ಸಹಕರಿಸುವುದಿಲ್ಲ. ಹೀಗಾಗಿ, ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಅನುಸರಿಸುವುದು ಉತ್ತಮ.

- ಶ್ರೀನಿವಾಸ್ ಚಕ್ರವರ್ತಿ,ಹೊಳಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT