ರೈತರ ಹಿತವೇ ಮುಖ್ಯ

7

ರೈತರ ಹಿತವೇ ಮುಖ್ಯ

Published:
Updated:

ಕೃಷಿ ಶಿಕ್ಷಣದಲ್ಲಿ ಖಾಸಗಿಯವರಿಗೆ ಅವಕಾಶ ಕಲ್ಪಿಸುವುದನ್ನು ವಿರೋಧಿಸಿ ಸರ್ಕಾರಿ ಕೃಷಿ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಕೃಷಿ ಶಿಕ್ಷಣ ಖಾಸಗೀಕರಣದ ಬೇಕು–ಬೇಡಗಳ ನೇರ ಪರಿಣಾಮ ಅನುಭವಿಸುವ ರೈತರು ಮಾತ್ರ ಸುಮ್ಮನಿದ್ದಾರೆ. ಇದನ್ನು ಎರಡು ರೀತಿಯಲ್ಲಿ ಅರ್ಥೈಸಬಹುದಾಗಿದೆ. ಒಂದೋ ಖಾಸಗೀಕರಣವನ್ನು ರೈತರು ಬೆಂಬಲಿಸುತ್ತಾರೆ. ಅಥವಾ ಈವರೆಗೂ ನಮ್ಮ ಕೃಷಿ ವಿದ್ಯಾಲಯಗಳು ರೈತರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.

ಖಾಸಗೀಕರಣವನ್ನು ವಿರೋಧಿಸುತ್ತಿರುವವರೂ ಸಹ, ‘ಖಾಸಗೀಕರಣದಿಂದ ಗುಣಮಟ್ಟ ಕುಸಿಯುತ್ತದೆ, ಪದವಿ ಪಡೆಯುವವರ ಸಂಖ್ಯೆ ಹೆಚ್ಚಾದರೆ, ಇನ್ನಷ್ಟು ನಿರುದ್ಯೋಗಿಗಳು ಸೃಷ್ಟಿಯಾಗುತ್ತಾರೆ’ ಎಂದು ವಾದಿಸು
ತ್ತಾರೆ. ಹಾಗಿದ್ದರೆ ಕೃಷಿ ಶಿಕ್ಷಣದ ಉದ್ದೇಶ ಉದ್ಯೋಗ ಹುಡುಕುವವರನ್ನು ಸೃಷ್ಟಿಸುವುದೋ ಅಥವಾ ಕೃಷಿ ತಜ್ಞರನ್ನು ಸೃಷ್ಟಿಸಿ ರೈತರಿಗೆ ನೆರವಾಗುವುದೋ?

ಖಾಸಗೀಕರಣದಿಂದ ವೈದ್ಯಕೀಯ, ಎಂಜಿನಿಯರಿಂಗ್‌ ಶಿಕ್ಷಣದ ಗುಣಮಟ್ಟ ಕುಸಿದಿದೆಯೇ? ಖಾಸಗಿ ಕಾಲೇಜುಗಳಲ್ಲಿ ಕೃಷಿ ಭೂಮಿ ಇರುವುದಿಲ್ಲ, ಶಿಕ್ಷಕರು ಇರುವುದಿಲ್ಲ ಎಂಬೆಲ್ಲ ಆರೋಪಗಳು ಸರ್ಕಾರಿ ಕೃಷಿ ಕಾಲೇಜು, ವಿಶ್ವವಿದ್ಯಾಲಯಗಳಿಗೂ ಅನ್ವಯಿಸುತ್ತವೆ. ಸರ್ಕಾರ ರೈತರನ್ನು ಗಮನದಲ್ಲಿಟ್ಟು ತೀರ್ಮಾನಗಳನ್ನು ತೆಗೆದುಕೊಳ್ಳಬೇಕೇ ಹೊರತು ವಿದ್ಯಾರ್ಥಿಗಳನ್ನಲ್ಲ.

ಕೃಷಿಯಲ್ಲಿ ಎಷ್ಟೇ ಸಾಧನೆ ಮಾಡಿದರೂ ಕೃಷಿಕರ ಜೀವನ ಸುಧಾರಿಸುತ್ತಿಲ್ಲ. ಕೃಷಿ ಶಿಕ್ಷಣದಲ್ಲೂ ಖಾಸಗಿಯವರು ಬಂದು, ಮಕ್ಕಳಿಗೆ ಸ್ಥಳೀಯ ಭಾಷೆಯಲ್ಲೇ ಶಿಕ್ಷಣ ದೊರೆತಿದ್ದರೆ ರೈತರ ಜೀವನಮಟ್ಟ ಸುಧಾರಿಸುತ್ತಿತ್ತೇನೋ!

-ಮಲ್ಲಿನಾಥ, ಹೆಮ್ಮಾಡಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !