ಸ್ಥಳಾಂತರ ಬೇಡ

7

ಸ್ಥಳಾಂತರ ಬೇಡ

Published:
Updated:

ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಏರ್‌ ಶೋ ಅನ್ನು ಲಖನೌಗೆ ಸ್ಥಳಾಂತರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದು ಸರಿಯಲ್ಲ.

1996ರಿಂದಲೇ ಬೆಂಗಳೂರಿನಲ್ಲಿ ಏರ್‌ ಶೋ ನಡೆಯುತ್ತಿದೆ. ಜಾಗತಿಕ ಮಟ್ಟದಲ್ಲಿ ಬೆಂಗಳೂರಿಗೆ ಹೆಗ್ಗಳಿಕೆ ಬರಲು ಇದೂ ಒಂದು ಕಾರಣ. ಜೊತೆಗೆ ಏರ್‌ಶೋ ಅನ್ನೇ ನಂಬಿ ಎಷ್ಟೋ ಕಂಪನಿಗಳು ಬೆಂಗಳೂರಿನಲ್ಲಿ ಬಂಡವಾಳ ಹೂಡಿಕೆ ಮಾಡಿವೆ. ಅವುಗಳಿಗೆ ಹೊಡೆತ ಬೀಳುತ್ತದೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ರಾಜ್ಯ ಸಭೆಗೆ ಆಯ್ಕೆಯಾದವರು. ರಾಜ್ಯದಿಂದ ಆಯ್ಕೆಯಾದ ಪ್ರತಿನಿಧಿಯಿಂದಲೇ ಕರ್ನಾಟಕಕ್ಕೆ ಅನ್ಯಾಯ ಆಗುತ್ತಿರುವುದು ವಿಪರ್ಯಾಸ.

ರಾಜ್ಯದ ಸಂಸದರು, ಸಚಿವರಾಗಿರುವವರು ಎಲ್ಲರೂ ಸೇರಿ ಈ ಪ್ರದರ್ಶನ ಬೇರೆ ರಾಜ್ಯಕ್ಕೆ ಸ್ಥಳಾಂತರ ಮಾಡದಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು.

 

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !