₹ 35 ಲಕ್ಷ ಕೃಷ್ಣಾರ್ಪಣ!

7

₹ 35 ಲಕ್ಷ ಕೃಷ್ಣಾರ್ಪಣ!

Published:
Updated:

ಕೃಷ್ಣಾ ನದಿಗೆ ಬಾಗಿನ ಅರ್ಪಿಸುವ ಅರ್ಧ ಗಂಟೆಯ ಕಾರ್ಯಕ್ರಮಕ್ಕೆ ₹ 35 ಲಕ್ಷ ವೆಚ್ಚ ಮಾಡಿರುವುದನ್ನು ತಿಳಿದು (ಪ್ರ.ವಾ., ಆ. 13) ಬಹಳ ದುಃಖವಾಯಿತು.

ಸಂಕಷ್ಟಕ್ಕೆ ಸಿಲುಕಿರುವ ರೈತರು ಒಂದು ಕಡೆಯಾದರೆ ರಾಜ್ಯದ ಖಜಾನೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದು ಇನ್ನೊಂದು ಕಡೆ. ಇಂಥ ಸ್ಥಿತಿಯಲ್ಲಿ ಬಾಗಿನ ಕಾರ್ಯಕ್ರಮಕ್ಕೆ ₹ 35 ಲಕ್ಷ ದುಂದುವೆಚ್ಚ ಮಾಡಿರುವುದು ಯಾವ ನ್ಯಾಯ?

ರಾಜ್ಯ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ ಎಂದು ಬಾಯಿ ಬಡಿದುಕೊಳ್ಳುತ್ತಿರುವ ಮುಖ್ಯಮಂತ್ರಿ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಈ ವಿಚಾರ ಅರ್ಥವಾಗುವುದಿಲ್ಲವೇ? 
ಮುಖ್ಯಮಂತ್ರಿಗೆ ರಾಜ್ಯದ ಜನರ ತೆರಿಗೆಯ ಹಣದ ಬಗ್ಗೆ ನಿಜವಾದ ಕಾಳಜಿ ಇದ್ದರೆ, ಹೋದಲ್ಲೆಲ್ಲ ಸರಳ ಕಾರ್ಯಕ್ರಮ ಆಯೋಜಿಸಲಿ. ಸರ್ಕಾರಿ ಕಾರ್ಯಕ್ರಮಗಳಿಗೆ ದುಂದುವೆಚ್ಚ ಮಾಡದಂತೆ ಆದೇಶ ಹೊರಡಿಸಲಿ.

 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !