ವಿಸ್ತಾರಗೊಂಡಿದೆ ಜಾನಪದ ಲೋಕ

7

ವಿಸ್ತಾರಗೊಂಡಿದೆ ಜಾನಪದ ಲೋಕ

Published:
Updated:

ಜಾನಪದ ಲೋಕದ ಪ್ರವೇಶ ಶುಲ್ಕವನ್ನು ಸಿನಿಮಾ ಥಿಯೇಟರ್‌ಗಳಲ್ಲಿಯಂತೆ ಏರಿಸಲಾಗಿದೆ ಎಂದು ಚಿಕ್ಕಜೋಗಿಹಳ್ಳಿ ನಾಗರಾಜ್‌ ಟೀಕಿಸಿದ್ದಾರೆ (ವಾ.ವಾ., ಫೆ. 4). ವರ್ಷವಿಡೀ ಸಂಕ್ರಾಂತಿ ಸಂಭ್ರಮ, ಗ್ರಾಮೀಣ ಆಟಗಳ ಉತ್ಸವ, ದಸರಾ ಉತ್ಸವದ ಜೊತೆಗೆ ದೊಡ್ಡ ಮಟ್ಟದಲ್ಲಿ ನಡೆಸುವ ಲೋಕೋತ್ಸವದಲ್ಲಿ ಹಿರಿಯ ಕಲಾವಿದರನ್ನು ಗೌರವಿಸುವ ಹಾಗೂ ಜನಪದ ಕಲೆಗಳ ಪ್ರದರ್ಶನ ವ್ಯವಸ್ಥೆ ಮಾಡಲಾಗುತ್ತದೆ. ಪ್ರತಿ ತಿಂಗಳ ಎರಡನೇ ಶನಿವಾರ ನಡೆಯುವ ಲೋಕಸಿರಿಯಂತಹ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಇರುತ್ತದೆ.

ಬದಲಾದ ಕಾಲಮಾನದಲ್ಲಿ ಜಾನಪದ ಲೋಕವು ಕಲಾಪ್ರತಿಮೆಗಳ ನಿರ್ಮಾಣ, ವಸ್ತುಸಂಗ್ರಹಾಲಯಗಳು, ಪ್ರತಿ ಭಾನುವಾರದ ಕಲಾ ಪ್ರದರ್ಶನಗಳನ್ನೂ ಒಳಗೊಂಡು ಈಗ ಮತ್ತಷ್ಟು ವಿಸ್ತಾರಗೊಂಡಿದೆ. ಹೀಗಿರುವಾಗ ಜಾನಪದ ಲೋಕದ ನಿರ್ವಹಣೆ, ಸಿಬ್ಬಂದಿ ವ್ಯವಸ್ಥೆ ಅತ್ಯಗತ್ಯ. ಕೇಂದ್ರದ ಹಸಿರು ಪರಿಸರವನ್ನು ಉಳಿಸಿಕೊಳ್ಳುವ ಕಾರ್ಯ ಶ್ರಮದಾಯಕವೂ ಆಗಿದೆ. ಹಾಗಾಗಿ ಅನಿವಾರ್ಯವಾಗಿ ಹಿರಿಯರು ಮತ್ತು ಮಕ್ಕಳ ಪ್ರವೇಶ ಶುಲ್ಕವನ್ನು ಸ್ಪಲ್ಪಮಟ್ಟಿಗೆ ಏರಿಸಲಾಗಿದೆ. ಆದರೆ, ಶೈಕ್ಷಣಿಕ ಪ್ರವಾಸಕ್ಕೆ ಬರುವ ಮಕ್ಕಳಿಗೆ ಪ್ರವೇಶ ಶುಲ್ಕದಲ್ಲಿ ರಿಯಾಯಿತಿಯೂ ಇದೆ. ಅಭಿವೃದ್ಧಿಯತ್ತ ಸಾಗುತ್ತಿರುವ, ಕಲೆ– ಕಲಾವಿದರನ್ನು ಪ್ರೋತ್ಸಾಹಿಸುತ್ತಿರುವ ಜಾನಪದ ಲೋಕದ ಬೆಳವಣಿಗೆಗೆ  ಎಲ್ಲರೂ ಸಹಕರಿಸಬೇಕು.

–ಆಡಳಿತಾಧಿಕಾರಿ, ಜಾನಪದ ಲೋಕ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !