ಕೂಡು ರಸ್ತೆಗಳ ಬಗ್ಗೆ ನಿರ್ಲಕ್ಷ್ಯವೇಕೆ?

ಶನಿವಾರ, ಮೇ 25, 2019
22 °C

ಕೂಡು ರಸ್ತೆಗಳ ಬಗ್ಗೆ ನಿರ್ಲಕ್ಷ್ಯವೇಕೆ?

Published:
Updated:

ಕೆಲವೆಡೆ ನಗರ ಪ್ರದೇಶಗಳಲ್ಲಷ್ಟೇ ರಸ್ತೆಗಳನ್ನು ಅಭಿವೃದ್ಧಿಪಡಿಸಿ, ಹಳ್ಳಿಗಳು ಹಾಗೂ ನಗರಗಳು ಕೂಡುವ ರಸ್ತೆಗಳನ್ನು ಹಾಗೆಯೇ ಬಿಡಲಾಗಿದೆ. ಇದರಿಂದ ಹಳ್ಳಿಗರ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ. ಹಳ್ಳಿಗಳಲ್ಲಿ ವಾಸ ಮಾಡುತ್ತಿರುವವರು ಇಂದಿಗೂ ಎಲ್ಲದಕ್ಕೂ ನಗರ–ಪಟ್ಟಣಗಳನ್ನೇ ಅವಲಂಬಿಸಿದ್ದಾರೆ. ಸರಕು, ಹಣ್ಣು, ತರಕಾರಿ ಎಲ್ಲವನ್ನೂ ನಗರಗಳಿಗೆ ಸಾಗಿಸುತ್ತಾರೆ. ಹಳ್ಳಿಗಳಿಂದ ನಗರಗಳ ಶಾಲಾ ಕಾಲೇಜುಗಳಿಗೆ ಸಂಚರಿಸುವ ವಿದ್ಯಾರ್ಥಿಗಳಿಗೂ ತೊಂದರೆಯಾಗುತ್ತಿದೆ. ರೋಗಿಗಳನ್ನು ಆಸ್ಪತ್ರೆಗಳಿಗೆ ಸಾಗಿಸಬೇಕಾದರೂ ಪರದಾಡುವ ಪರಿಸ್ಥಿತಿ ಇದೆ.

ವಿಜಯಪುರದ ಬಿ.ಬಿ. ಇಂಗಳಗಿ ಮತ್ತು ದೇವರಹಿಪ್ಪರಗಿ ನಡುವೆ ಇರುವ ರಸ್ತೆಯಲ್ಲಿ ಅಪಘಾತಗಳು ಹೆಚ್ಚಾಗಿ ನಡೆಯುತ್ತವೆ. ಹೀಗಾಗಿ ಈ ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಸ್ಥಳೀಯ ಯುವಕರು ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಯಾನ ಆರಂಭಿಸಿದ್ದರು. ಈ ಮೂಲಕ ಮುಖ್ಯಮಂತ್ರಿ, ಅಧಿಕಾರಿಗಳು ಮತ್ತು ಶಾಸಕರ ಗಮನ ಸೆಳೆದಿದ್ದರೂ ಕೆಲಸ ಮಾತ್ರ ಆಗಲೇ ಇಲ್ಲ. ಸರ್ಕಾರವು ಹಳ್ಳಿಗಳಿಗೆ ಹೆಚ್ಚಿನ ಒತ್ತು ಕೊಟ್ಟು ರಸ್ತೆಗಳನ್ನು ಅಭಿವೃದ್ಧಿಪಡಿಸಿ, ಹಳ್ಳಿಗರ ತೊಂದರೆ ನಿವಾರಿಸಲಿ.

-ಅಮಿತಕುಮಾರ ಬಿರಾದಾರ, ವಿಜಯಪುರ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !