ಶನಿವಾರ, ಆಗಸ್ಟ್ 17, 2019
24 °C

ಟಿಕ್ ಟಾಕ್: ಕ್ರಮ ಅಗತ್ಯ

Published:
Updated:

ಟಿಕ್ ಟಾಕ್ ಮತ್ತೆ ಸದ್ದು ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿನ ಈ ವಿಡಿಯೊ ಆ್ಯಪ್‌ನಿಂದಾಗಿ ಅಮಾಯಕರು ಅಪಾಯ ತಂದುಕೊಳ್ಳುತ್ತಿರುವ, ಜೀವ ಕಳೆದುಕೊಳ್ಳುತ್ತಿರುವ ಘಟನೆಗಳು ನಮ್ಮ ಸುತ್ತಮುತ್ತ ಸಂಭವಿಸುತ್ತಿವೆ. ಆರಂಭದಲ್ಲಿ ಯುವಜನರು ತಮ್ಮ ಪ್ರತಿಭೆ ತೋರಿಸಿಕೊಳ್ಳಲು ಇದು ವೇದಿಕೆಯೆಂಬಂತೆ ಕಂಡುಬಂದರೂ ನಂತರದ ದಿನಗಳಲ್ಲಿ ಅದೇ ಒಂದು ಸಮಸ್ಯೆಯಾಗಿ ಪರಿಣಮಿಸತೊಡಗಿದೆ. ಇತ್ತೀಚೆಗಂತೂ ಟಿಕ್ ಟಾಕ್‌ನಲ್ಲಿ ಅಶ್ಲೀಲ ವಿಡಿಯೊ ಹಾವಳಿ ಹೆಚ್ಚಾಗಿದೆ. ಇಂಥ ವಿಡಿಯೊಗಳಿಂದ ಒಂದು ಬಾರಿ ಎಚ್ಚೆತ್ತಿದ್ದ ಕೇಂದ್ರ ಸರ್ಕಾರ, ಟಿಕ್‌ ಟಾಕ್‌ ಆ್ಯಪ್ ಅನ್ನು ಪ್ಲೇ ಸ್ಟೋರ್‌ನಿಂದ ನಿಷೇಧಿಸಿತ್ತು. ಆದರೂ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರಿಂದ ಟಿಕ್‌ ಟಾಕ್‌ಗೆ ಮತ್ತೆ ಕಡಿವಾಣ ಇಲ್ಲ ದಂತಾಗಿದೆ. ಇದು ಕೈಮೀರುವ ಮೊದಲು ಸರ್ಕಾರ, ಬಳಕೆದಾರರು ಎಚ್ಚೆತ್ತುಕೊಳ್ಳುವುದು ಅನಿವಾರ್ಯ.

– ಸಹನಾ ಜಿ.ಆರ್., ಗುಬ್ಬಿ

Post Comments (+)