ಶನಿವಾರ, ಮೇ 28, 2022
30 °C

ಉಳಿಯಲಿ ಜೀವಾಮೃತ ನದಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನದಿಗಳು ಜೀವಸಂಕುಲದ ತಾಣಗಳು. ಮೂರ್ನಾಲ್ಕು ದಶಕಗಳ ಹಿಂದೆ ನದಿಗಳು ವರ್ಷದುದ್ದಕ್ಕೂ ತುಂಬಿ ಹರಿಯುತ್ತಿದ್ದವು. ಜೊತೆಗೆ ತೀರ ಮಾಲಿನ್ಯಯುತವಾಗಿಯೇನೂ ಇರಲಿಲ್ಲ. ಆದರೆ, ಕಳೆದ ಎರಡು ದಶಕಗಳಲ್ಲಿ ನದಿಗಳ ನೀರು ತೀವ್ರ ಮಲಿನವಾಗಿದೆ. ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಮೈದುಂಬಿ ಹರಿಯುತ್ತಿದ್ದ ಫಲ್ಗುಣಿ ನದಿಯೂ ಕಾರ್ಖಾನೆಗಳ ವಿಷಕಾರಿ ತ್ಯಾಜ್ಯದಿಂದ ಮಲಿನವಾಗಿರುವುದನ್ನು ನೋಡಿದರೆ ಭವಿಷ್ಯದ ಬಗ್ಗೆ ಆತಂಕ ಮೂಡುತ್ತದೆ. ರಾಜ್ಯದ ಹಲವು ಜೀವನದಿಗಳು ವಿಷಕಾರಿ ರಾಸಾಯನಿಕ ವಸ್ತುಗಳು ಮತ್ತು ತ್ಯಾಜ್ಯಗಳಿಂದ ತಮ್ಮ ಹರಿಯುವಿಕೆಯನ್ನು ನಿಲ್ಲಿಸಿ, ಹೆಪ್ಪುಗಟ್ಟಿ ನಿಲ್ಲುವ ಹಂತಕ್ಕೆ ಬರುತ್ತಿವೆ.

ಹರಿಹರ ಮತ್ತು ರಾಣೆಬೆನ್ನೂರಿನ ಮಧ್ಯೆ ಹರಿಯುವ ತುಂಗಭದ್ರಾ ನದಿಯೂ ತುಂಬಾ ಕಲುಷಿತಗೊಂಡಿದೆ. ಇಕ್ಕೆಲಗಳ ಗ್ರಾಮಸ್ಥರು ಶ್ವಾಸಕೋಶ ಸೇರಿದಂತೆ ಇನ್ನಿತರ ತೊಂದರೆಗಳಿಂದ ಬಳಲುತ್ತಿದ್ದಾರೆ. ಇಂತಹ ದೊಡ್ಡ ದೊಡ್ಡ ನದಿಗಳ ಪರಿಸ್ಥಿತಿ ಹೀಗಾದರೆ ಸಣ್ಣ ನದಿಗಳು ಮತ್ತು ಹಳ್ಳಕೊಳ್ಳಗಳ ಪರಿಸ್ಥಿತಿ ಊಹಿಸಬಹುದಾಗಿದೆ. ಈ ದಿಸೆಯಲ್ಲಿ ಆಳುವ ವರ್ಗದ ಜೊತೆಗೆ ಜನರು ಸಹ ಜೀವಾಮೃತ ನದಿಗಳ ಉಳಿವಿಗಾಗಿ ಎಚ್ಚರಿಕೆ ವಹಿಸಬೇಕಾಗಿದೆ.

ಮಲ್ಲಪ್ಪ ಫ. ಕರೇಣ್ಣನವರ, ರಾಣೆಬೆನ್ನೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು