ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಮುಂದೆ ಮಂಡಿಯೂರಬೇಕಾದೀತು!

Last Updated 21 ಜನವರಿ 2022, 15:30 IST
ಅಕ್ಷರ ಗಾತ್ರ

ನಾವೆಲ್ಲ ಮತ್ತೊಂದು ಗಣರಾಜ್ಯೋತ್ಸವ ಆಚರಿಸುವ ಉತ್ಸಾಹದಲ್ಲಿದ್ದೇವೆ. ಕೊರೊನಾ ಉಲ್ಬಣದ ನಡುವೆ ರಾಷ್ಟ್ರೀಯ ಹಬ್ಬಗಳ ಆಚರಣೆ ಸರಳ ರೀತಿಯಲ್ಲಿ ನಡೆದರೂ ರಾಷ್ಟ್ರಾಭಿಮಾನವನ್ನು ಮಾತ್ರ ಇಮ್ಮಡಿಗೊಳಿಸುತ್ತವೆ. ಮಕ್ಕಳಿಗೆ ನಾವು ಇತಿಹಾಸದ ಪಾಠಗಳನ್ನು ಹೇಳುವಾಗ ಶೋಷಣೆ, ದಬ್ಬಾಳಿಕೆ, ಅಸಮಾನತೆ ಹಾಗೂ ವಸಹಾತುಶಾಹಿ ಧೋರಣೆಗಳಿಂದ ಆದ ಅನಾಹುತಗಳನ್ನು ತಿಳಿಸುತ್ತೇವೆ ಹಾಗೂ ಭಾರತದ ಸ್ವಾತಂತ್ರಕ್ಕಾಗಿ ನಡೆದ ತ್ಯಾಗ, ಆದರ್ಶಗಳನ್ನು ಹೇಳುತ್ತಾ ಸಮಾನತೆ, ಸಂವಿಧಾನದ ಮಹತ್ವ ಹಾಗೂ ಮೌಲ್ಯಗಳನ್ನು ತಿಳಿಸಿಕೊಡುತ್ತೇವೆ. ಇದನ್ನೆಲ್ಲಾ ತಿಳಿದುಕೊಂಡ ನಂತರ ಮಕ್ಕಳನ್ನು ಕಾಡುವ ಬಹುದೊಡ್ಡ ಪ್ರಶ್ನೆಯೆಂದರೆ, ಸ್ವತಂತ್ರಾ ನಂತರದ ಭಾರತದಲ್ಲಿ ಸಂವಿಧಾನ, ಪ್ರಜಾಸತ್ತಾತ್ಮಕ ಗಣರಾಜ್ಯ, ಉದಾರ ನ್ಯಾಯದಾನ ವ್ಯವಸ್ಥೆಯಿದ್ದೂ ಯಾಕೆ ಇಂದು ಅಸಮಾನತೆ, ಹಿಂಸೆ, ದೌರ್ಜನ್ಯಗಳು ತಾಂಡವವಾಡುತ್ತಿವೆ, ಜಾತಿ ಮತ್ಸರ, ಧರ್ಮಾಂಧತೆ ಹಾಗೂ ಶೋಷಣೆಗಳ ಮಾತು ಸಂವಿಧಾನಾತ್ಮಕ ಹುದ್ದೆಗಳಲ್ಲಿ ಇರುವವರಿಂದಲೇ ಕೇಳಿಬರುತ್ತವೆ ಎಂದು. ಖಂಡಿತಾ ಅವರು ತಮಗೆ ಎದುರಾಗುವ ವಯಸ್ಕರಾದ ತಂದೆತಾಯಿಗಳು ಹಾಗೂ ಶಿಕ್ಷಕರನ್ನು ಈ ಬಗ್ಗೆ ಕೇಳುತ್ತಾರೆ. ಅಲ್ಲದೆ ಚಿಂತಕರು, ಮೇಧಾವಿಗಳು, ಸಾಹಿತಿಗಳೆಲ್ಲ ಸಂವಿಧಾನದ ಆಶಯಗಳಿಗೆ ಅಪಾಯ ಎದುರಾಗಿದೆ ಎಂದು ಪುಂಖಾನುಪುಂಖವಾಗಿ ಲೇಖನ ಕಥೆ-ಕವನಗಳನ್ನು ಬರೆಯುತ್ತಾರೆ, ಆದರೂ ಅನ್ಯಾಯಗಳು ಏಕೆ ಹೆಚ್ಚಾಗುತ್ತಿವೆ, ಹಾಗಾದರೆ ಅವುಗಳನ್ನು ನೀವೇಕೆ ಪ್ರಶ್ನಿಸಲಿಲ್ಲ ಹಾಗೂ ಪ್ರತಿಭಟಿಸಲಿಲ್ಲ ಎಂದು ಕೇಳಿದರೆ, ವಯಸ್ಕರಾದ ನಾವು ಅವರ ಮುಂದೆ ಮಂಡಿಯೂರಬೇಕಾಗುತ್ತದೆ. ನಾವು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಇಂತಹ ಅನ್ಯಾಯಗಳಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ.

ಹಾಗಾಗಿ ಮುಂದಿನ ಪ್ರಜೆಗಳಾದ ಮಕ್ಕಳು ನಮ್ಮನ್ನು ಪ್ರಶ್ನಿಸಿದಾಗ, ಅವರಿಗೆ ಉತ್ತರ ಕೊಡುವಷ್ಟಾದರೂ ನಮ್ಮಲ್ಲಿ ನೈತಿಕತೆ ಉಳಿದಿರಬೇಕು.

–ಸುವರ್ಣ ಸಿ.ಡಿ.,ತರೀಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT