ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಅಗ್ನಿಪಥ್: ಸೇನೆಗೆ ಬಲ

Last Updated 14 ಜೂನ್ 2022, 20:00 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಅಗ್ನಿಪಥ್ ಯೋಜನೆ ಸ್ವಾಗತಾರ್ಹವಾಗಿದೆ. ಈ ಯೋಜನೆಯ ಮೂಲಕ ಯುವಜನರಿಗೆ 4 ವರ್ಷದ ಅವಧಿಗೆ ಸೇನೆಯ ತ್ರಿವಿಧ ದಳಗಳಲ್ಲಿ ಸೇವೆ ಮಾಡಲು ಅವಕಾಶ ಸಿಗಲಿದೆ. ಗರಿಷ್ಠ 45 ಸಾವಿರ ಯುವಜನರನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಈ ಯೋಜನೆಯು ಉದ್ಯೋಗಾವಕಾಶ ನೀಡುವುದರ ಜೊತೆಗೆ ದೇಶದ ರಕ್ಷಣಾ ಸೇವೆ ಮಾಡಬೇಕೆಂಬ ಯುವಜನರ ಆಸೆಯನ್ನೂ ಈಡೇರಿಸಲಿದೆ.

ರಕ್ಷಣಾ ಇಲಾಖೆಗೆ ನಿಯೋಜಿಸುವ ವಾರ್ಷಿಕ ಬಜೆಟ್‌ನ ಅರ್ಧದಷ್ಟು ಹಣ ಪಿಂಚಣಿ ಮತ್ತು ವೇತನ ನೀಡಲು ವ್ಯಯವಾಗುತ್ತಿದೆ. ಅಗ್ನಿಪಥ್ ಯೋಜನೆಯಡಿ ಸೇವೆ ಸಲ್ಲಿಸಿದವರಿಗೆ ಪಿಂಚಣಿ ಸೌಲಭ್ಯ ಇರುವುದಿಲ್ಲವಾದ್ದರಿಂದ ಇಲಾಖೆ ಮೇಲಿನ ಆರ್ಥಿಕ ಭಾರ ಕಡಿಮೆಯಾಗಲಿದೆ. ಹೀಗೆ ಉಳಿಯುವ ಹಣವನ್ನು ಮೂರು ಸೇನೆಗಳ ಆಧುನೀಕರಣಕ್ಕೆ ವ್ಯಯಿಸಿ ಸೇನೆಗಳ ಸಾಮರ್ಥ್ಯ ಹೆಚ್ಚಿಸಬಹುದಾಗಿದೆ.

-ಚನ್ನಕೇಶವ ಜಿ.ಕೆ.,ತರೀಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT