ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಠೇವಣಿದಾರರ ಹಿತರಕ್ಷಣೆಗೂ ಗಮನವಿರಲಿ

ಅಕ್ಷರ ಗಾತ್ರ

ಪ್ರತೀ ತ್ರೈಮಾಸಿಕದ ಅಂತ್ಯಕ್ಕೆ ಬ್ಯಾಂಕುಗಳು ಕೋಟ್ಯಂತರ ರೂಪಾಯಿ ಲಾಭ ಗಳಿಸುತ್ತಿರುವುದನ್ನುನೋಡುತ್ತಿದ್ದೇವೆ. ಆದರೆ ಅದೇ ಬ್ಯಾಂಕುಗಳು ಸಾರ್ವಜನಿಕರು ಇಡುವ ಠೇವಣಿ ಹಣದ ಮೇಲೆ ಬಡ್ಡಿ ನೀಡುವಾಗ ಮಾತ್ರ ಅತಿ ಜಿಪುಣತನವನ್ನು ತೋರಿಸುತ್ತವೆ. ಬ್ಯಾಂಕುಗಳು ಉಳಿದಿರುವುದು ಮತ್ತು ಬೆಳೆಯುತ್ತಿರುವುದು ಸಾರ್ವಜನಿಕರು ಬ್ಯಾಂಕುಗಳಲ್ಲಿ ಠೇವಣಿ ಇಡುತ್ತಿರುವ ಅಪಾರ ಮೊತ್ತದ ಮೇಲೆ. ಅದೇ ಹಣದ ಮೇಲೆ ವ್ಯಾಪಕ ವ್ಯವಹಾರ ನಡೆಸುತ್ತ, ಮರಳಿ ಬಾರದ ಸಾಲವನ್ನು ಹಲವರಿಗೆ ನೀಡಿಯೂ ಅವು ಬಹಳಷ್ಟು ಲಾಭ
ಗಳಿಸುತ್ತಿವೆ.

ಲಾಭದ ಕೆಲವೊಂದು ಅಂಶವು ಗ್ರಾಹಕರಿಗೆ ಮತ್ತು ಅದರಲ್ಲೂ ಠೇವಣಿದಾರರಿಗೆ ವರ್ಗಾವಣೆಯಾಗಬೇಕು. ಬ್ಯಾಂಕುಗಳು ತಮ್ಮ ಹಿತಾಸಕ್ತಿಯನ್ನಷ್ಟೇ ಪರಿಗಣಿಸದೆ ಠೇವಣಿದಾರರ ಹಿತವನ್ನೂ ಗಣನೆಗೆ ತೆಗೆದುಕೊಳ್ಳಬೇಕು.

-ವೆಂಕಟೇಶ ಮಾಚಕನೂರ,ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT