ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಅವಮಾನವಲ್ಲ... ಜಾತಿ ಮೇಲರಿಮೆಯ ಪ್ರಶ್ನೆ

ಅಕ್ಷರ ಗಾತ್ರ

ಬಸವಣ್ಣನವರ ಪಠ್ಯದಲ್ಲಿ ‘ಜನಿವಾರ ಕಿತ್ತುಹಾಕಿ ಹೋದರು ಎಂದು ಅಲ್ಲಿತ್ತು. ಉಪನಯನ ಆಗಿ ಹೋದರು ಎಂಬುದು ಇಲ್ಲಿದೆ. ಅದರಲ್ಲಿ ಅವಮಾನ ಆಗುವಂಥದ್ದೇನಿದೆ’ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪ್ರಶ್ನಿಸಿದ್ದಾರೆ (ಪ್ರ.ವಾ., ಜೂನ್ 15). ‘ಜನಿವಾರ ಕಿತ್ತುಹಾಕಿ ಹೋದರು’ ಎಂಬ ನುಡಿಗಳು ಬಸವಣ್ಣನವರ ಮನದಲ್ಲಿ ಜಾತಿ ವ್ಯವಸ್ಥೆಯ ವಿರುದ್ಧವಾಗಿ ತುಡಿಯುತ್ತಿದ್ದ ಭಾವನೆಗಳನ್ನು ಸಂಕೇತಿಸುತ್ತವೆ. ಕೆಲವು ಜಾತಿಯ ಜನರು ತಮ್ಮ ಮೈಮೇಲೆ ಜನಿವಾರವನ್ನು ತೊಡುವುದರ ಮೂಲಕ, ತಾವು ಜನಿವಾರ ತೊಡದವರಿಗಿಂತ ಮೇಲಿನವರು ಎಂಬ ಭಾವವನ್ನು ಹೊಂದಿರುವುದನ್ನು ಬಸವಣ್ಣನವರು ಪ್ರಶ್ನಿಸಿದ್ದರು.

ಬಸವಣ್ಣನವರ ದೃಷ್ಟಿಯಲ್ಲಿ ಜಾತಿವ್ಯವಸ್ಥೆಯು ದುಡಿಯುವ ವರ್ಗದ ಜನಸಮುದಾಯವನ್ನು ಅನ್ನ, ಬಟ್ಟೆ, ವಸತಿ, ವಿದ್ಯೆ, ಆರೋಗ್ಯದಿಂದ ವಂಚಿತರನ್ನಾಗಿ ಮಾಡಿ, ಹಸಿವು ಬಡತನ ಮತ್ತು ಅಪಮಾನದಿಂದ ನರಳುವುದಕ್ಕೆ ಕಾರಣವಾದ ಕ್ರೂರ ವ್ಯವಸ್ಥೆಯಾಗಿತ್ತು. ಆದ್ದರಿಂದಲೇ ‘ಎಲ್ಲ ಮಾನವರು ಒಂದೇ’ ಎಂಬ ಸಂದೇಶವನ್ನು ಸಾರುವುದಕ್ಕಾಗಿ ಮತ್ತು ಜಾತಿ ವ್ಯವಸ್ಥೆಯ ಬೇರನ್ನು ಅಲುಗಿಸಿ ಸಡಿಲಿಸುವುದರ ಸಂಕೇತವಾಗಿ ಜಾತಿ ಮೇಲರಿಮೆಯ ಸಂಪ್ರದಾಯದಂತೆ ತಮಗೆ ತೊಡಿಸಿದ್ದ ಜನಿವಾರವನ್ನು ಕಿತ್ತುಹಾಕಿ ಹೋದರು.ಉಪನಯನ ಆಗಿ ಹೋದರು ಎಂಬ ನುಡಿಗಳು ಮೇಲಿನ ಎಲ್ಲಾ ಸಂಗತಿಗಳನ್ನು ಮರೆ ಮಾಚುತ್ತವೆ.

-ಸಿ.ಪಿ.ನಾಗರಾಜ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT