ಬೆಳಗಾವಿಯಲ್ಲಿ ನಡೆದಿರುವ ವಿಧಾನಮಂಡಲದ ಅಧಿವೇಶನದಲ್ಲಿ ಸದನದಲ್ಲಿ ಖಾಲಿ ಖುರ್ಚಿಗಳನ್ನು ನೋಡಿದಾಗ, ಇಂತಹ ಅಧಿವೇಶನದ ಅಗತ್ಯವಿತ್ತೇ ಮತ್ತು ಈ ರೀತಿ ತೆರಿಗೆದಾರನ ಹಣವನ್ನು ಪೋಲು ಮಾಡಬಹುದೇ ಎನ್ನಿಸದಿರದು. ಶಾಸಕರ ಅದರಲ್ಲೂ ಮುಖ್ಯವಾಗಿ ರಾಜ್ಯದ ಉತ್ತರ ಭಾಗದ ಶಾಸಕರಲ್ಲೂ ಅಂತಹ ಉತ್ಸಾಹ ಕಾಣದಿರುವಾಗ ಇಂತಹ ಪ್ರಯತ್ನ ಬೇಕಿತ್ತೇ? ಈ ರೀತಿ ಕಾಟಾಚಾರದ ಅಧಿವೇಶನ ನಡೆಸುವ ಬದಲು ಬೆಂಗಳೂರಿನ ವಿಧಾನಸೌಧದಿಂದ ಈಗಾಗಲೇ ನಿರ್ಧರಿಸಿರುವ ಕಚೇರಿಗಳನ್ನಾದರೂ ಬೆಳಗಾವಿಗೆ ಸ್ಥಳಾಂತರಿಸುವ ಕೆಲಸ ಮಾಡಬಹುದಿತ್ತು. ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಈ ಅಧಿವೇಶನದಲ್ಲಿ ಉತ್ತರ ಸಿಗುತ್ತದೆ ಎನ್ನುವ ನಿರೀಕ್ಷೆಯೂ ಹುಸಿಯಾಗುತ್ತಿದೆ. ಅಧಿವೇಶನಕ್ಕಿಂತ ಹೆಚ್ಚಾಗಿ ಸುವರ್ಣಸೌಧದ ಮುಂದೆ ನಡೆಯುವ ಪ್ರತಿಭಟನೆಗಳ ಕಾವು ಹೆಚ್ಚಾಗಿ ಕಾಣುತ್ತಿದೆ.
ರಮಾನಂದ ಶರ್ಮಾ,ಬೆಂಗಳೂರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.