ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ‘ಪುಸ್ತಕ ಪರಿಚಯ’ ಮಾಸಿಕ ಪ್ರಕಟವಾಗಲಿ

ಅಕ್ಷರ ಗಾತ್ರ

ಇಂದು ಕನ್ನಡ ಪುಸ್ತಕಗಳನ್ನು ಕೊಳ್ಳುವವರೂ ಇಲ್ಲ, ಓದುವವರೂ ಇಲ್ಲ ಎನ್ನುವ ನಕಾರಾತ್ಮಕ ಮಾತುಗಳು ಕೇಳಿಬರುತ್ತವೆ. ಇದು ನಿಜವೂ ಹೌದು. ಕಾಲಕಾಲಕ್ಕೆ ಪ್ರಕಟವಾಗುವ ಕನ್ನಡ ಪುಸ್ತಕಗಳನ್ನು ಖರೀದಿಸಲು ಸಾರ್ವ ಜನಿಕ ಗ್ರಂಥಾಲಯ ಇಲಾಖೆಗೆ ಅದಕ್ಕಾಗಿ ಸಂಗ್ರಹವಾಗುವ ತೆರಿಗೆಯ ಹಣವನ್ನು ಬಿಡುಗಡೆ ಮಾಡದೆ, ಪುಸ್ತಕ ಖರೀದಿಯನ್ನೇ ಸ್ಥಗಿತ ಮಾಡಿರುವ ಸರ್ಕಾರದ ಕನ್ನಡದ ಬಗೆಗಿನ ಔದಾಸೀನ್ಯವೂ ಇದಕ್ಕೆ ಒಂದು ಕಾರಣ.

ಪ್ರಕಟವಾಗುವ ಪುಸ್ತಕಗಳ ಮಾಹಿತಿ, ಅದರ ಪರಿಚಯ ಮತ್ತು ದೊರಕುವ ಸ್ಥಳದ ವಿವರವನ್ನು ಓದುಗರಿಗೆ ಒದಗಿಸುವ ವ್ಯವಸ್ಥೆಯೇ ಇಲ್ಲದಿರುವುದೂ ಮತ್ತೊಂದು ಕಾರಣ. ಕನ್ನಡ ಸಾಹಿತ್ಯ ಪರಿಷತ್ ಈಗಲಾದರೂ ಇದನ್ನು ಗಮನಿಸಿ ರಾಜ್ಯದಾದ್ಯಂತ ಇರುವ ಪರಿಷತ್ತಿನ ಶಾಖೆಗಳಲ್ಲಿ ಪುಸ್ತಕ ಮಾರಾಟ ಮಳಿಗೆ ತೆರೆಯಲು ಸಾಧ್ಯವೇ ಪರಿಶೀಲಿಸಬೇಕು. ಇನ್ನು ಬಹುಮುಖ್ಯವಾಗಿ, ಪ್ರಕಟವಾದ ಪುಸ್ತಕಗಳು, ಅದರ ಪರಿಚಯ, ಅದು ಸಿಗುವ ಸ್ಥಳ ತಿಳಿಸುವ ‘ಪುಸ್ತಕ ಪರಿಚಯ’ ಮಾಸಿಕವನ್ನು ಪ್ರಕಟಿಸಲಿ. ಇದರಿಂದ ನಿಜದಲ್ಲಿ ಕನ್ನಡ ಪುಸ್ತಕ ಕೊಳ್ಳುವ, ಓದುವ ಹವ್ಯಾಸಕ್ಕೆ ಕಾಯಕಲ್ಪವಾಗುತ್ತದೆ.

-ಸತ್ಯಬೋಧ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT