ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಸೀಟು ಬೆಲ್ಟ್‌: ಆಧಾರರಹಿತ ತರ್ಕ

ಅಕ್ಷರ ಗಾತ್ರ

ಕಾರುಗಳಲ್ಲಿ ಎಲ್ಲ ಫ್ರಂಟ್‌ ಫೇಸಿಂಗ್‌ (ಮುಂಬದಿ ಮುಖ ಮಾಡಿರುವ) ಸೀಟುಗಳಿಗೂ ವಾಹನ ತಯಾರಕರು ಕಡ್ಡಾಯವಾಗಿ ಸೀಟು ಬೆಲ್ಟ್ ಅಳವಡಿಸುವಂತೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವರು ತಿಳಿಸಿದ್ದಾರೆ. 2025ರ ಒಳಗೆ ರಸ್ತೆ ಅಪಘಾತದ ಸಾವಿನ ಪ್ರಮಾಣವನ್ನು ಕಡಿತಗೊಳಿಸುವ ಗುರಿಯನ್ನು ಹೊಂದಲಾಗಿದೆ ಎಂದು ಅವರು ಹೇಳಿದ್ದಾರೆ. ವಾಹನ ಸವಾರರು ಕೇವಲ ಹೆಲ್ಮೆಟ್ ಧರಿಸುವುದರಿಂದ, ಸೀಟು ಬೆಲ್ಟ್ ಹಾಕುವುದರಿಂದ ಅಪಘಾತಕ್ಕೆ ಈಡಾಗುವುದಿಲ್ಲ, ಅಪಘಾತಕ್ಕೀಡಾದರೂ ಸಾಯುವುದಿಲ್ಲ ಎಂಬ ತರ್ಕವೇ ಆಧಾರರಹಿತ.

ಮುಖ್ಯವಾಗಿ, ಅಪಘಾತಗಳಾಗುತ್ತಿರುವುದು ರಸ್ತೆಯಲ್ಲಿನ ಅವೈಜ್ಞಾನಿಕ ಉಬ್ಬುಗಳು, ಗುಂಡಿಗಳು, ಅಸಮರ್ಪಕ ಸಂಕೇತಸೂಚಕ ಫಲಕಗಳ ಅಳವಡಿಕೆಯಂತಹ ಕಾರಣಗಳಿಂದ ಎಂಬುದನ್ನು ಗಮನಿಸಬೇಕಿದೆ. ರಸ್ತೆಗಳನ್ನು ಸರಿಪಡಿಸದೆ, ತರಹೇವಾರಿ ಅತ್ಯಧಿಕ ವೇಗದ ವಾಹನಗಳನ್ನು ಉತ್ಪಾದಿಸುತ್ತಿದ್ದರೆ, ಸ್ಪರ್ಧೆಗೆ ಬಿದ್ದವರಂತೆ ಪ್ರಖರ ಹೆಡ್‍ಲೈಟುಗಳನ್ನು ಬಳಸಲು ಅವಕಾಶ ನೀಡುತ್ತಿದ್ದರೆ, ಪ್ರತಿಯೊಂದು ವಾಹನದ ಹಿಂಭಾಗ ಮತ್ತು ಮುಂಭಾಗದಲ್ಲಿ ಪ್ರತಿಫಲಕಗಳನ್ನು ಅಳವಡಿಸದೇ ಇದ್ದರೆ ಅಪಘಾತಗಳು ಹೇಗೆ ಕಡಿಮೆಯಾದಾವು? ಸೀಟು ಬೆಲ್ಟ್ ಕಡ್ಡಾಯದ ಜೊತೆಗೆ ಈ ಅಂಶಗಳತ್ತಲೂ ಗಮನಹರಿಸಿದರೆ ಸಾರಿಗೆ ಸಚಿವರು ಜನಸಾಮಾನ್ಯರ ಬಗ್ಗೆ ಹೊಂದಿರುವ ಕಳಕಳಿಗೆ ಅರ್ಥ ಬರುತ್ತದೆ.

- ಡಾ. ಚನ್ನು ಅ. ಹಿರೇಮಠ,ರಾಣೆಬೆನ್ನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT