ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಕೋಟ್ಯಂತರ ಹಣ ರೈಟ್‌ಆಫ್?

ಅಕ್ಷರ ಗಾತ್ರ

ಕಳೆದ ಐದು ಹಣಕಾಸು ವರ್ಷಗಳಲ್ಲಿ ಬ್ಯಾಂಕುಗಳು ಒಟ್ಟು ₹ 9.91 ಲಕ್ಷ ಕೋಟಿ ಮೊತ್ತದ ಸಾಲವನ್ನು ‘ರೈಟ್ಆಫ್‌’ ಮಾಡಿವೆ ಎಂದು ಕೇಂದ್ರ ಸರ್ಕಾರವು ಸಂಸತ್ತಿಗೆ ಮಾಹಿತಿ ನೀಡಿದೆ ಎಂದು ವರದಿಯಾಗಿದೆ. ಈ ವರದಿ ಓದಿದೊಡನೆ ದಿಗ್ಭ್ರಮೆಯಾಯಿತು. ಸಾಲ ಕೊಟ್ಟ ನಂತರ ಅದನ್ನು ವಸೂಲು ಮಾಡುವುದು ಬ್ಯಾಂಕಿನ ಆದ್ಯ ಕರ್ತವ್ಯಲ್ಲವೇ? ಸಣ್ಣ ಮನೆ ಕಟ್ಟಿಕೊಳ್ಳಲು ಸಾಲ ಪಡೆಯಲು ಬ್ಯಾಂಕ್‌ಗೆ ಹೋದಾಗ ಯಾಕಾದರೂ ಸಾಲಕ್ಕೆ ಬಂದೆವೋ ಎಂಬಷ್ಟು ನಿಯಮಗಳು ನಿಮ್ಮೆದುರು ತೆರೆದುಕೊಳ್ಳುತ್ತವೆ. ಸಾಲ ಮಾಡಿ ವಾಹನ ಕೊಂಡವರು ಒಂದೆರಡು ಕಂತು ಸಾಲ ಕಟ್ಟದಿದ್ದರೆ ನೋಟಿಸ್‌ ಮೇಲೆ ನೋಟಿಸ್‌ ನೀಡಿ ಮನೆಗೇ ಬರುತ್ತಾರೆ. ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಾರೆ. ಮನೆಯ ವಿದ್ಯುತ್ ಬಿಲ್ ಪಾವತಿಸುವಲ್ಲಿ ತಡವಾದರೆ ಸಂಪರ್ಕವನ್ನೇ ಕಡಿಯುತ್ತಾರೆ.

ಇಂತಹವೆಲ್ಲಾ ಇರುವಾಗ ಹತ್ತಾರು ಕೋಟಿ ಸಾಲ ಪಡೆದವರಲ್ಲಿ ಕೆಲವರು ಸಾಲ ಬೇಕೆಂದೇ ಕಟ್ಟದೆ ನುಂಗಿ ನೀರು ಕುಡಿದು ನಿರಾಳವಾಗಿರುತ್ತಾರೆ. ಅಂತಹವರಿಂದ ಸಾಲ ಮರುಪಾವತಿ ಮಾಡಿಸಿಕೊಳ್ಳಲು ಬ್ಯಾಂಕ್‌ಗಳಿಗೆ ಸಾಧ್ಯವಾಗದಿರುವುದು ಏಕೆ?

- ಪತ್ತಂಗಿ ಎಸ್. ಮುರಳಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT