ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಸಮಕಾಲೀನ ಪ್ರಜ್ಞೆಯ ಸಂಪಾದಕೀಯ

ಅಕ್ಷರ ಗಾತ್ರ

‘ನೆಲದ ಕಾನೂನನ್ನು ಉಲ್ಲಂಘಿಸಲು ಹಾತೊರೆಯುವ ಸರ್ಕಾರ...’ ಶೀರ್ಷಿಕೆಯ ಸಂಪಾದಕೀಯ (ಪ್ರ.ವಾ.,
ಆ. 2) ತುಂಬಾ ಸಾಮಯಿಕ, ಸ್ಪಷ್ಟ ಹಾಗೂ ಅರ್ಥಪೂರ್ಣವಾಗಿದೆ. ‘ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು’ ಎಂಬಂತಹ ಅಥವಾ ‘ಕ್ರಿಯೆ- ಪ್ರತಿಕ್ರಿಯೆ’ ಎಂಬಂತಹ ವೈಚಾರಿಕ ಪಳೆಯುಳಿಕೆ ಇಂದಿನ ಪ್ರಜಾಪ್ರಭುತ್ವದ ಕಾಲದಲ್ಲಿ ಯಾರಿಗೂ ಸಲ್ಲದು; ಉನ್ನತ ಅಧಿಕಾರದಲ್ಲಿರುವವರಿಗಂತೂ ಖಂಡಿತಾ ಸಲ್ಲದ ನಿಲುವು.

ಒಂದು ಕಡೆ ಜಾತಿ- ಮತ- ಭಾಷೆ- ಲಿಂಗ ಸಮಾನತೆಯ ಆದರ್ಶವನ್ನು ಲಕ್ಷ್ಯದಲ್ಲಿಟ್ಟುಕೊಂಡಿರುವ ನಮ್ಮ ಸಂವಿಧಾನ, ಅದೇ ಸಂವಿಧಾನಕ್ಕೆ ನಿಷ್ಠರಾಗಿರುತ್ತೇವೆಂದು ಪ್ರಮಾಣ ಮಾಡಿ ಆನಂತರ ‘ನಾವು ಅವಶ್ಯಕ
ವಾದರೆ ಎನ್‍ಕೌಂಟರ್ ಮಾಡುವುದಕ್ಕೂ ಸಿದ್ಧ’ ಎಂದು ಸಾರ್ವಜನಿಕವಾಗಿ ಘೋಷಿಸುವ ಪ್ರಭುತ್ವ– ಇವೆರಡರ ನಡುವೆ ಇರುವ ಘೋರ ವ್ಯಂಗ್ಯವನ್ನು ಈ ಸಂಪಾದಕೀಯ ಸಮಗ್ರವಾಗಿ ಕಟ್ಟಿಕೊಡುತ್ತದೆ. ಕರ್ನಾಟಕಕ್ಕೆ ‘ಬುಲ್ಡೋಜರ್‌’ ಸಂಸ್ಕೃತಿ ಖಂಡಿತಾ ಬೇಡ. ಕರ್ನಾಟಕದ ಎಲ್ಲಾ ಪ್ರಜೆಗಳ ಕಣ್ಣು ತೆರೆಸುವಂತಿದೆ ಸಂಪಾದಕೀಯ. ಈ ಬಗೆಯ ಪ್ರಗತಿಪರ ಹಾಗೂ ಅನುಕರಣೀಯ ನಿಲುವು ಎಂದೆಂದಿಗೂ ‘ಪ್ರಜಾವಾಣಿ’ಯ ನಿಲುವಾಗಿರಲಿ.

ಸಿ.ಎನ್. ರಾಮಚಂದ್ರನ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT