ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಶಿಕ್ಷಿತ ಶಿಕ್ಷಕರೇ... ಇದೆಂಥ ಪರಿಪಾಟ?

ಅಕ್ಷರ ಗಾತ್ರ

ರಾಜ್ಯ ವಿಧಾನ ಪರಿಷತ್ತಿನ ನಾಲ್ಕು ಕ್ಷೇತ್ರಗಳ ಪ್ರತಿನಿಧಿಗಳ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಪದವೀಧರರು, ಶಿಕ್ಷಕರು ಮತ ಚಲಾಯಿಸಿದ್ದಾರೆ. ಈ ಚುನಾವಣೆಯ ನಾಲ್ಕು ಕ್ಷೇತ್ರಗಳಲ್ಲಿ ಸರಾಸರಿ ಶೇ 75ರಷ್ಟು ಮತದಾನ ಆಗಿದೆ.

ಪದವೀಧರರೂ ಶಿಕ್ಷಕರೂ ಆಗಿರುವ ಉಳಿದ ಶೇಕಡ 25ರಷ್ಟು ಮತದಾರರು ತಮ್ಮ ಮತವನ್ನು ಚಲಾಯಿಸದೇ ಇರುವುದಕ್ಕೆ ಕಾರಣ ಏನು? ಇದರಿಂದ ಅವರು ಸಮಾಜಕ್ಕೆ ನೀಡುವ ಸಂದೇಶವಾದರೂ ಏನು? ಇಂದಿನ ಮಕ್ಕಳನ್ನು ಮುಂದಿನ ಭವ್ಯ ಪ್ರಜೆಗಳನ್ನಾಗಿ ರೂಪಿಸುವ ಶಿಕ್ಷಕರಿಂದ ಇಂತಹ ನಡೆ ಅಕ್ಷಮ್ಯ. ಪ್ರಜಾಪ್ರಭುತ್ವದ ಮೂಲ ಪ್ರಕ್ರಿಯೆಯೇ ಮತದಾನ. ಅದರಿಂದಲೇ ದೂರ ಉಳಿಯುವಂತಹ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳಬೇಕು. ಇಂತಹವರೇ ಈ ಪರಿಪಾಟ ಬೆಳೆಸಿಕೊಂಡರೆ ಇನ್ನು ಜನಸಾಮಾನ್ಯರನ್ನು ಮತದಾನಕ್ಕೆ ಒಲಿಸುವುದು ಹೇಗೆ?

-ಪತ್ತಂಗಿ ಎಸ್. ಮುರಳಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT