ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಕ್ರಿಮಿನಾಶಕಗಳ ಬಳಕೆ: ತಿಳಿವಳಿಕೆ ಅಗತ್ಯ

ಅಕ್ಷರ ಗಾತ್ರ

ಬೆಂಗಳೂರು ನಗರದ ಮನೆಯೊಂದರಲ್ಲಿ ತಿಗಣೆ ನಿಯಂತ್ರಿಸಲು ಕ್ರಿಮಿನಾಶಕ ಸಿಂಪಡಿಸಿದ್ದರಿಂದ ಆರು ವರ್ಷದ ಒಬ್ಬ ಬಾಲಕಿ ಮೃತಪಟ್ಟಿರುವುದು ವರದಿಯಾಗಿದೆ. ಇದು, ಅತ್ಯಂತ ನೋವಿನ ಸಂಗತಿ. ಕ್ರಿಮಿನಾಶಕಗಳನ್ನು ಬೇರೆ ಬೇರೆ ಕಾರಣಕ್ಕೆ ಬಳಸುತ್ತೇವೆ. ಆದರೆ, ಅವುಗಳ ಬಳಕೆ ಮತ್ತು ಪರಿಣಾಮದ ಬಗೆಗೆ ಅನೇಕರಲ್ಲಿ ಸ್ಪಷ್ಟ ಅರಿವು ಇರುವುದಿಲ್ಲ. ಈ ಕಾರಣಕ್ಕಾಗಿ ಅವಘಡಗಳು ಸಂಭವಿಸುತ್ತವೆ.

ಮಾರುಕಟ್ಟೆಯಲ್ಲಿ ಕ್ರಿಮಿನಾಶಕಗಳುಗ್ರಾಹಕರಿಗೆ ಸುಲಭವಾಗಿ ಸಿಗುತ್ತವೆ. ಆದರೆ, ಅವುಗಳನ್ನು ಮಾರುವ ಅಂಗಡಿ ಮಾಲೀಕರಿಗೂ ಅವುಗಳ ಬಳಕೆ ಬಗ್ಗೆ ಅರಿವು ಇರುವುದಿಲ್ಲ. ಮಾರಾಟ ಮಾಡುವುದಷ್ಟೇ ಗುರಿ. ಅಪಾಯಕಾರಿ ಕ್ರಿಮಿನಾಶಕಗಳ ಬಗೆಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು.

- ಡಾ. ಜಿ. ಬೈರೇಗೌಡ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT