ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಬೇಕಾದುದು ಯಾವ ಅಭಿವೃದ್ಧಿಯ ಮಾದರಿ?!

ಅಕ್ಷರ ಗಾತ್ರ

ಉತ್ತರ ಪ್ರದೇಶದಲ್ಲಿನ ಚುನಾವಣಾ ಸಂದರ್ಭದಲ್ಲಿ ಹುಟ್ಟಿಕೊಂಡಿರುವ ಅಭಿವೃದ್ಧಿ ಮಾದರಿ ತಾಳೆ ಕುರಿತ ವರದಿಯಿಂದ (ಪ್ರ.ವಾ., ಫೆ. 16) ಕರ್ನಾಟಕ ಅನೇಕ ಪಾಠಗಳನ್ನು ಕಲಿಯಬಹುದಾಗಿದೆ. ದೇಶದಲ್ಲಿ ಅಭಿವೃದ್ಧಿಯ ಯಾವುದೇ ಸೂಚಿಯನ್ನು ತೆಗೆದುಕೊಂಡರೂ ಕೇರಳವು ಅನೇಕ ದಶಕಗಳಿಂದಲೂ ಮುಂಚೂಣಿಯಲ್ಲಿರುವುದು ದಾಖಲಾಗಿದೆ. ಇದು ಮಾನವ ಅಭಿವೃದ್ಧಿಯಲ್ಲಿನ ಸಾಧನೆ ಮಾತ್ರವಲ್ಲ. ಕೇರಳದ ತಲಾ ವರಮಾನ 2019-20ರಲ್ಲಿ ₹ 2.22 ಲಕ್ಷವಿದ್ದರೆ ಗುಜರಾತಿನಲ್ಲಿ ಇದು ₹ 2.14 ಲಕ್ಷವಿದೆ. ಉತ್ತರಪ್ರದೇಶದ ತಲಾ ವರಮಾನ ₹ 65,704. ಇದು ಕೇರಳದ ತಲಾ ವರಮಾನದ ಶೇ 30ರಷ್ಟಾಗುತ್ತದೆ.

ದೇಶದ ಜನಸಂಖ್ಯೆಯಲ್ಲಿ ಶೇ 2.76ರಷ್ಟು ಪಾಲು ಪಡೆದಿರುವ ಕೇರಳವು ಜಿಡಿಪಿಗೆ ಶೇ 3.79 ಕಾಣಿಕೆ ನೀಡುತ್ತಿದೆ. ಕೇರಳದ ಜನಸಂಖ್ಯೆಯ 6 ಪಟ್ಟು ಅಧಿಕ ಜನಸಂಖ್ಯೆಯಿರುವ ಉತ್ತರಪ್ರದೇಶವು ದೇಶದ ಜಿಡಿಪಿಗೆ ನೀಡುತ್ತಿರುವ ಕಾಣಿಕೆ ಕೇರಳದಕ್ಕಿಂತ ಎರಡು ಪಟ್ಟು ಮಾತ್ರ (ಶೇ 7.35).

ಕರ್ನಾಟಕವು ಕೇರಳ ಅಭಿವೃದ್ಧಿ ಮಾದರಿಯಿಂದ ಪಾಠ ಕಲಿಯಬೇಕೇ ವಿನಾ ಗುಜರಾತ್ ಮಾದರಿ ಅಥವಾ ಉತ್ತರಪ್ರದೇಶದ ಅಭಿವೃದ್ಧಿ ಮಾದರಿಗಳಿಂದಲ್ಲ ಎಂಬುದು ಇಂದು ಸ್ಪಷ್ಟವಾಗಿದೆ.
ಟಿ.ಆರ್.ಚಂದ್ರಶೇಖರ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT