ಶುಕ್ರವಾರ, ಡಿಸೆಂಬರ್ 3, 2021
27 °C

ವಾಚಕರ ವಾಣಿ | ಎಸಿಬಿ ದಾಳಿ: ಅಖಿಲ ಭಾರತ ನಾಟಕ ಸಮ್ಮೇಳನ!

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪವಿದ್ದ ಅಧಿಕಾರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನಡೆಸಿದ ದಾಳಿಯಿಂದ ಕೋಟಿಗಟ್ಟಲೆ ಹಣ, ಆಸ್ತಿ ದಾಖಲೆ ಪತ್ತೆಯಾಗಿರುವುದಾಗಿ ವರದಿಯಾಗಿದೆ. ಇದನ್ನು ನೋಡಿದರೆ ಅಖಿಲ ಭಾರತ ನಾಟಕ ಸಮ್ಮೇಳನದಂತೆ ಭಾಸವಾಗುತ್ತದೆ. ಯಾಕೆಂದರೆ ಕಳೆದ 40 ವರ್ಷಗಳಿಂದಲೂ ಈ ಬಗೆಯ ದಾಳಿಗಳನ್ನು ನೋಡಿ ಸಾಕಾಗಿದೆ. ದಾಳಿಯಾದ ಯಾವ ಅಧಿಕಾರಿಯನ್ನೂ ವಜಾ ಮಾಡಿಲ್ಲ, ಜೈಲಿಗೆ ಹಾಕಿಲ್ಲ, ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿಲ್ಲ. ಇಂತಹ ಅಧಿಕಾರಿಗಳು ಲಂಚ ನೀಡಿ ಪುನಃ ಕೆಲಸಕ್ಕೆ ಹಾಜರಾಗುವುದು ನಡೆದಿದೆ. ಈ ಹಿಂದೆ ಹೀಗೆ ಎಸಿಬಿ, ಲೋಕಾಯುಕ್ತ ದಾಳಿಗೊಳಗಾದ ಅಧಿಕಾರಿಗಳ ಪಟ್ಟಿ, ಅವರಿಗಾದ ಶಿಕ್ಷೆಯನ್ನು ಸರ್ಕಾರ ಮೊದಲು ಪ್ರಕಟಿಸಲಿ.

- ಡಾ. ಎಚ್.ಆರ್.ಪ್ರಕಾಶ್, ಕೆ.ಬಿ.ದೊಡ್ಡಿ, ಮಂಡ್ಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು