ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಜನಪದ ಪರಂಪರೆಗೆ ಅಪಮಾನ

ಅಕ್ಷರ ಗಾತ್ರ

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಅವರು 30 ಸಾವಿರ ‘ಹೆಬ್ಬೆಟ್ಟುಗಳು’ ಪರಿಷತ್ತಿನ ಸದಸ್ಯರಾಗಿ ರುವುದಾಗಿಯೂ, ಅವರಿಗೆ ಅಕ್ಷರ ಕಲಿಸಿ ಪರೀಕ್ಷೆ ನಡೆಸುವುದಾಗಿಯೂ ಹೇಳಿಕೆ ನೀಡಿದ್ದಾರೆ (ಪ್ರ.ವಾ., ಫೆ. 12). ಒಂದು ಭಾಷಾ ಸಮುದಾಯದಲ್ಲಿ ಅಕ್ಷರಸ್ಥರು ಮತ್ತು ಅನಕ್ಷರಸ್ಥರು ಎಂಬ ವಿಂಗಡಣೆ ಮಾಡುವುದೇ ಅಪರಾಧ. ನಾವೀಗ ಅನುಸಂಧಾನ ಮಾಡುತ್ತಿರುವ ಕನ್ನಡ ಸಾಹಿತ್ಯ- ಸಂಸ್ಕೃತಿಯ ಬೆಳವಣಿಗೆಯಲ್ಲಿ ಅಕ್ಷರಸ್ಥರಿಗಿಂತ ಅನಕ್ಷರಸ್ಥರ ಕೊಡುಗೆ ದೊಡ್ಡದು.

ಅಕ್ಷರ ಗೊತ್ತಿರುವುದಕ್ಕೂ ಸಾಹಿತ್ಯಕ್ಕೂ ನೇರಾನೇರ ಸಂಬಂಧವಿಲ್ಲ. ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿ ಮಾಡುವ ಕಾರ್ಯಕ್ರಮ ಮಾಡುವುದು ಒಳ್ಳೆಯದಾದರೂ, ಅಧ್ಯಕ್ಷರ ಮಾತುಗಳು ಅನಕ್ಷರಸ್ಥರ ಸದಸ್ಯತ್ವ ಅಪಮಾನವೆಂಬಂತೆ ಇದ್ದು, ಅವರನ್ನು ‘ಹೆಬ್ಬೆಟ್ಟುಗಳು’ ಎಂದು ವ್ಯಂಗ್ಯ ಮಾಡುವ ಮೂಲಕ ಬಹುದೊಡ್ಡ ಜನಪದ ಪರಂಪರೆಗೆ ಅಪಮಾನ ಮಾಡಿದಂತಾಗಿದೆ.

- ಹುಲಿಕುಂಟೆ ಮೂರ್ತಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT