ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಮಾನವ ಘನತೆ ಎತ್ತಿಹಿಡಿಯೋಣ

ಅಕ್ಷರ ಗಾತ್ರ

ಭಾರತದ ಸೊಬಗು ಬಹುತ್ವದಲ್ಲಿ ಇದೆ. ದೇಶದ ಭವಿಷ್ಯವು ಏಕತೆ, ಸಾಮರಸ್ಯ ಮತ್ತು ಸಮಗ್ರತೆಯಲ್ಲಿ ಅಡಗಿದೆ. ಎಲ್ಲರ ಪಾಲ್ಗೊಳ್ಳುವಿಕೆಯಿಂದ ಮಾತ್ರ ಇಲ್ಲಿ ಅಭಿವೃದ್ಧಿ ಸಾಧ್ಯ. ಮತೀಯ ನೆಲೆಯಲ್ಲಿ ನಡೆಯುತ್ತಿರುವ ಘರ್ಷಣೆಗಳು ನಾಡನ್ನು ಹಿಂದಕ್ಕೆ ಒಯ್ಯುತ್ತವೆ ಎಂಬ ಅರಿವು ನಮ್ಮ ಜನನಾಯಕರಲ್ಲಿ ಇರಬೇಕು.

ತಿಳಿವಳಿಕೆಯ ಅಭಾವದಿಂದ ದಾರಿ ತಪ್ಪಿರುವ ಜನರಲ್ಲಿ ಜೀವನ್ಮುಖಿ ಚಿಂತನೆ, ಬೆಳಕು ಮೂಡುವಂತೆ ಮಾಡುವ ಗುರುತರ ಹೊಣೆ ಪ್ರಜ್ಞಾವಂತರ ಮೇಲಿದೆ. ಇದಕ್ಕಾಗಿ ಅಗತ್ಯವೆನಿಸಿದರೆ ಪ್ರತಿವರ್ಷ ಸರ್ವಧರ್ಮ ಸಮ್ಮೇಳನ ಆಯೋಜಿಸಬಹುದು. ಎಲ್ಲ ಧರ್ಮಗಳ ಗುರುಗಳು, ಮಠಾಧೀಶರು, ಪಾದ್ರಿಗಳು, ಮೌಲ್ವಿಗಳು ಅದರಲ್ಲಿ ಭಾಗವಹಿಸಿ ಜನರಲ್ಲಿ ಅರಿವು ಮೂಡಿಸಬೇಕು. ಮಾನವ ಘನತೆಯನ್ನು ಎತ್ತಿಹಿಡಿಯುವಂತಹ ಕೆಲಸ ತುರ್ತಾಗಿ ಆಗಬೇಕಿದೆ. ಅಮಾಯಕರ ಬದುಕನ್ನು ಯಾವುದೇ ಕಾರಣಕ್ಕೆ ಅಪಾಯಕ್ಕೆ ದೂಡಬಾರದು.

-ಎಂ. ಮಂಚಶೆಟ್ಟಿ, ಕಡಿಲುವಾಗಿಲು, ಮದ್ದೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT