ಭಾನುವಾರ, ಡಿಸೆಂಬರ್ 5, 2021
27 °C

ವಾಚಕರ ವಾಣಿ | ಮನೆ ಕುಸಿತಕ್ಕೆ ಬೇರೆಯದೇ ಕಾರಣ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಳೆಗೆ ಕಟ್ಟಡಗಳು ಬಿದ್ದಿವೆ. ಇದಕ್ಕೆ ಮುಖ್ಯ ಕಾರಣ ಕಟ್ಟಡಕ್ಕೆ ಭದ್ರ ಅಡಿಪಾಯ ಇಲ್ಲದೇ ಇರುವುದು. ಬೆಂಗಳೂರಿನಲ್ಲಿ ಕೆರೆ ಜಾಗದಲ್ಲಿ ಮನೆ ಕಟ್ಟಿರುವುದು, ಕೆರೆ ಜಾಗ ಪರಿವರ್ತಿಸಿ ನಿವೇಶನ ಮಾಡಿ ಅಲ್ಲಿ ಮನೆ ಕಟ್ಟಿರುವುದು, ತಗ್ಗು ಪ್ರದೇಶಗಳಲ್ಲಿ ಮನೆ ಕಟ್ಟಿರುವುದು ಮುಖ್ಯ ಕಾರಣ.

ನಿವೇಶನ ಮಾಡುವ ಸಮಯದಲ್ಲಿ ನೆಲವನ್ನು ಮಟ್ಟ ಮಾಡಿರುತ್ತಾರೆ. ಆದರೆ ಅದರಲ್ಲಿ ಏನು ತುಂಬಿರುತ್ತಾರೆ ಎಂದು ಹೇಳಲಾಗುವುದಿಲ್ಲ. ಇಲ್ಲಿ ತಳದ ಮಣ್ಣು ಯಾವಾಗಲೂ ಸಡಿಲವಾಗಿರುತ್ತದೆ. ಇಂತಹ ಜಾಗಗಳಲ್ಲಿ ಸರ್ಕಾರದ ಆದೇಶದ ಪ್ರಕಾರ ನೀರು ಸಂಗ್ರಹ ಮಾಡಿದರೆ ತಳಹದಿ ಕುಸಿಯುತ್ತದೆ. ಎಷ್ಟೇ ಭದ್ರ ಅಡಿಪಾಯ ಹಾಕಿದ್ದರೂ ನೀರು ತುಂಬಿದ ಮೇಲೆ ಕುಸಿಯುವ ಸಾಧ್ಯತೆ ಹೆಚ್ಚು. ಸರ್ಕಾರವೇ ಹರಿವ ನೀರನ್ನು ಸರ್ಕಾರದ ಜಮೀನುಗಳಲ್ಲಿ ಸಂಗ್ರಹಿಸಿ ಮರುಬಳಕೆ ಮಾಡಿದರೆ ಸೂಕ್ತ.

- ಡಾ. ಮಲ್ಲಿಕಾರ್ಜುನ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು