ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಗುಪ್ತಚರ ಇಲಾಖೆಯನ್ನು ಬಲಪಡಿಸಿ

ಅಕ್ಷರ ಗಾತ್ರ

ರಾಜ್ಯದಲ್ಲಿ 15 ದಿನಗಳಿಂದ ಈಚೆಗೆ ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಿರುವ ಸರಣಿ ಕೊಲೆಗಳನ್ನು ಗಮನಿಸಿದರೆ ಈ ಕೊಲೆಗಳು ಯಾವುವೂ ಆಕಸ್ಮಿಕವಾಗಿ ನಡೆದಂತೆ ಭಾಸವಾಗುವುದಿಲ್ಲ. ಅವೆಲ್ಲವೂ ಪೂರ್ವತಯಾರಿಯಿಂದಲೇ ನಡೆದಿರಬಹುದಾದ ಶಂಕೆ ಮೂಡುತ್ತದೆ. ಇದರಿಂದ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ರಾಜ್ಯದಲ್ಲಿ ಗುಪ್ತಚರ ಇಲಾಖೆಯೊಂದು ಇದೆಯೋ ಇಲ್ಲವೋ ಎಂಬ ಅನುಮಾನ ಬರುತ್ತದೆ. ಕೊಲೆಯಾದ ಮೇಲೆ ತನಿಖೆ, ಬಂಧನ, ವಿಚಾರಣೆ ಎಂದು ಹೆಣಗುತ್ತಿದ್ದೇವೆ. ಆದರೆ ಕೊಲೆ ತಡೆಯಲು ಬಿಗಿ ಕ್ರಮ ತೆಗೆದುಕೊಳ್ಳಲು ನಮ್ಮಿಂದ ಇನ್ನೂ ಸಾಧ್ಯವಾಗಿಲ್ಲ. ಈ ದಿಸೆಯಲ್ಲಿ ಗುಪ್ತಚರ ಇಲಾಖೆಯ ಪಾತ್ರ ಮುಖ್ಯವಾಗಿದೆ. ಅದನ್ನು ಬಲಪಡಿಸುವ ಕೆಲಸ ತಕ್ಷಣ ಆಗಬೇಕು.

- ಡಾ.ಆನಂದಕುಮಾರ ಎಂ. ಜಕ್ಕಣ್ಣವರ,ಸುಲಧಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT