‘ನೋಟಾ ಬೇಡ’ ಯಾಕೆ?

ಶುಕ್ರವಾರ, ಏಪ್ರಿಲ್ 26, 2019
24 °C

‘ನೋಟಾ ಬೇಡ’ ಯಾಕೆ?

Published:
Updated:

‘ನೋಟಾ ಅವಕಾಶ: ದ್ವಂದ್ವ ಯಾಕೆ?’ ಎಂಬ ಲೇಖನದಲ್ಲಿ (ಸಂಗತ, ಏ. 15) ಪ್ರಕಾಶ ದೇಶಪಾಂಡೆ ಅವರು ‘ನೋಟಾ ಬೇಡ’ ಅಭಿಯಾನದ ಬಗ್ಗೆ ಹೇಳುತ್ತಾ, ಅದು ಅನವಶ್ಯಕ ಎಂಬಂತೆ ವಾದ ಮಂಡಿಸಿದ್ದಾರೆ.

ಆದರೆ, ಈ ವಾದವನ್ನು ಒಪ್ಪಲು ಸಾಧ್ಯವಿಲ್ಲ. ಏಕೆಂದರೆ, ನೋಟಾ ಎಂಬುದು ಮತದಾರರಿಗೆ ನೀಡಿರುವ
ಅತ್ಯಂತ ಮಹತ್ವದ ಆಯ್ಕೆಯಾಗಿದೆ.

ಒಂದು ವೇಳೆ ನೋಟಾಗೆ ಅತೀ ಹೆಚ್ಚು ಮತಗಳು ಬಂದರೆ, ಆ ಕ್ಷೇತ್ರದಲ್ಲಿ ಯಾವುದೇ ಅಭ್ಯರ್ಥಿ ಆಯ್ಕೆಯಾಗಿಲ್ಲ ಎಂದು ಘೋಷಿಸಬೇಕು. ಬೇರೆ ಅಭ್ಯರ್ಥಿಗಳೊಂದಿಗೆ ಮತ್ತೊಮ್ಮೆ ಚುನಾವಣೆ ನಡೆಸಬೇಕು. ಇದರಿಂದ, ಜನರ ಆಶೋತ್ತರಗಳಿಗೆ ಒಪ್ಪದ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕೆ ಇಳಿಸುವ ರಾಜಕೀಯ ಪಕ್ಷಗಳಿಗೆ ಒಂದು ಪಾಠ ಕಲಿಸಿದಂತಾಗುತ್ತದೆ. ಆದರೆ, ಹೀಗೆ ಮಾಡುವಾಗ ಸಾರ್ವಜನಿಕ ಹಣದ ವ್ಯರ್ಥವನ್ನು ಪರಿಗಣಿಸಿ, ಮೊದಲ ಬಾರಿ ಸ್ಪರ್ಧಿಸಿದ ಎಲ್ಲಾ ಅಭ್ಯರ್ಥಿಗಳಿಂದ ಆ ಚುನಾವಣೆಗೆ ವೆಚ್ಚವಾದ ಹಣವನ್ನು ಸಂಗ್ರಹಿಸಬೇಕು. ಈ ರೀತಿ ಒಂದು ವ್ಯವಸ್ಥಿತ ರೂಪುರೇಷೆಯನ್ನು ಚುನಾವಣೆಗೆ ನೀಡಿದಾಗ ಪ್ರಜಾಪ್ರಭುತ್ವ ಸಾರ್ಥಕವಾಗುತ್ತದೆ.

ದರ್ಶನ್ ಕೆ.ಓ., ದೇವಿಕೆರೆ ಹೊಸೂರು

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !