ಶಿಕ್ಷಣದಲ್ಲೂ ಬರದ ಛಾಯೆ?

ಶುಕ್ರವಾರ, ಏಪ್ರಿಲ್ 19, 2019
27 °C

ಶಿಕ್ಷಣದಲ್ಲೂ ಬರದ ಛಾಯೆ?

Published:
Updated:

ಈ ಬಾರಿರ ದ್ವಿತೀಯ ಪಿಯು ಫಲಿತಾಂಶದಲ್ಲಿ ಚಿತ್ರದುರ್ಗ ಜಿಲ್ಲೆಯು ಕೊನೆಯ ಸ್ಥಾನಕ್ಕೆ ಕುಸಿದಿರುವುದು ಆಘಾತಕಾರಿ. ಪ್ರತಿವರ್ಷ 22 ಅಥವಾ 23ನೇ ಸ್ಥಾನದಲ್ಲಿ ಇರುತ್ತಿದ್ದ ಜಿಲ್ಲೆಯು ಈ ಬಾರಿ ತೀರಾ ಕಳಪೆ ಮಟ್ಟದಲ್ಲಿ ಫಲಿತಾಂಶ ದಾಖಲಿಸಿದೆ.

ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ. ಜಿಲ್ಲೆಗೆ ಮಳೆಯ ಕೊರತೆಯಿಂದ ಬರದ ನಾಡು ಎಂಬ ಹೆಸರಿದೆ. ಹಾಗೆಂದು ಪ್ರತಿ ಕ್ಷೇತ್ರದಲ್ಲೂ ‘ಬರ’ದ ಛಾಯೆಯನ್ನೇ ಕಾಣುವಂತೆ ಆಗಬಾರದು. ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶ ಗಿಟ್ಟಿಸಿಕೊಳ್ಳಲು ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆ ಗಮನಹರಿಸಬೇಕಿದೆ.

ಹನುಮೇಶ್ ಎಂ. ಭೀಮನಕೆರೆ, ಚಿತ್ರದುರ್ಗ
 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !