ಶಿಕ್ಷಕರೇ, ಶಾಲೆ ವಿರೂಪಗೊಳಿಸದಿರಿ

ಗುರುವಾರ , ಏಪ್ರಿಲ್ 25, 2019
31 °C

ಶಿಕ್ಷಕರೇ, ಶಾಲೆ ವಿರೂಪಗೊಳಿಸದಿರಿ

Published:
Updated:

ಲೋಕಸಭೆಗೆ ರಾಜ್ಯದಲ್ಲಿ ಮೊದಲ ಹಂತದ ಮತದಾನ ಇದೇ 18ರಂದು ನಡೆಯಲಿದೆ. ಸಾಮಾನ್ಯವಾಗಿ ಶಾಲಾ ಕಾಲೇಜುಗಳಲ್ಲಿ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಚುನಾವಣೆಯ ಸಂದರ್ಭದಲ್ಲಿ ತರಗತಿಯ ಗೋಡೆಗಳು, ಕಪ್ಪು ಹಲಗೆ, ಕುರ್ಚಿ, ಟೇಬಲ್ಲು ಹೀಗೆ ಎಲ್ಲೆಂದರಲ್ಲಿ ಚುನಾವಣಾ ಸಿಬ್ಬಂದಿ ಮತದಾನ ಕೇಂದ್ರದ ಸಂಖ್ಯೆಗಳನ್ನು ಬರೆದು, ಮೊಳೆಗಳನ್ನು ಹೊಡೆದು, ಹಲವಾರು ಭಿತ್ತಿಪತ್ರಗಳನ್ನು ಅಂಟಿಸಿ ಶಾಲೆಗಳನ್ನು ವಿರೂಪಗೊಳಿಸುತ್ತಾರೆ. ಇದರಿಂದ, ಶಾಲೆಗಳು ಪ್ರಾರಂಭವಾದ ಮೇಲೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ತೊಂದರೆಯಾಗುತ್ತದೆ.

ಶಾಲೆಯ ಕಪ್ಪು ಹಲಗೆಯ ಮೇಲೆ ಬಳಿದ ಪೆಯಿಂಟ್‌ ಮತ್ತು ಅಂಟಿಸಿದ ಭಿತ್ತಿಪತ್ರಗಳಿಂದ ಅವು ಶಾಶ್ವತವಾಗಿ ವಿರೂಪಗೊಂಡು, ಕೆಲವೊಮ್ಮೆ ಮರುಬಳಕೆ  ಸಾಧ್ಯವಾಗುವುದಿಲ್ಲ. ಚುನಾವಣಾ ಸಿಬ್ಬಂದಿಯಲ್ಲಿ ಬಹುತೇಕ ಶಿಕ್ಷಕ ಬಂಧುಗಳೇ ಇರುತ್ತಾರೆ. ಇವರಾದರೂ ಶಾಲೆ ಯಾವುದೇ ಆಗಲಿ, ತಮ್ಮ ಚುನಾವಣಾ ಕರ್ತವ್ಯದ ಸಂದರ್ಭದಲ್ಲಿ ‘ಅದು ನಮ್ಮದೇ ಶಾಲೆ’ ಎಂಬ ಪ್ರೀತಿಯಿಂದ, ಸ್ವಲ್ಪ ಎಚ್ಚರದಿಂದ ಕಾರ್ಯ ನಿರ್ವಹಿಸಿದರೆ, ಇಂತಹ ಅಧ್ವಾನವನ್ನು ತಪ್ಪಿಸಬಹುದು.

ಡಾ. ರುದ್ರೇಶ್ ಅದರಂಗಿ, ಬೆಂಗಳೂರು
 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !