ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ದೂರದರ್ಶನದಲ್ಲಿ ಮರುಪ್ರಸಾರವಾಗಲಿ

ಅಕ್ಷರ ಗಾತ್ರ

ಈ ವರ್ಷ ಕೊರೊನಾ ವೈರಸ್‌ ಕಾರಣಕ್ಕೆ ಜನರ ಹಿತದೃಷ್ಟಿಯಿಂದ ಸರಳ ದಸರಾ ನಡೆಸಲು ತೀರ್ಮಾನಿಸಿದ್ದು ಸರಿಯಾದ ನಿರ್ಧಾರ. ದಸರಾ ಉದ್ಘಾಟನೆಯನ್ನು ಹೃದ್ರೋಗ ತಜ್ಞ ಡಾ. ಸಿ.ಎನ್‌.ಮಂಜುನಾಥ್ ಅವರಿಂದ ಕೊರೊನಾ ವಾರಿಯರ್ಸ್ ಸಮ್ಮುಖದಲ್ಲಿ ನೆರವೇರಿಸಿರುವುದು ಸಂತೋಷದ ಸಂಗತಿ.

ಜಂಬೂಸವಾರಿಯಂದು ಸಾಂಪ್ರದಾಯಿಕವಾಗಿ ಪೂಜೆ ನಡೆದು, ಅರಮನೆ ಸುತ್ತ ಕಡಿಮೆ ಜನರೊಂದಿಗೆ ಮೆರವಣಿಗೆ ನಡೆಸಲು ತೀರ್ಮಾನಿಸಲಾಗಿದೆ. ಇದು, ಜನರ ಹಿತದೃಷ್ಟಿಯಿಂದ ಒಳ್ಳೆಯ ನಿರ್ಧಾರವೇ ಆಗಿದೆ. ಆದರೆ ಅರಮನೆ ಆವರಣದಲ್ಲಿ ಸಾಂಪ್ರದಾಯಿಕ ಪೂಜೆ ನಡೆದ ನಂತರ, ಕಳೆದ ವರ್ಷ ನಡೆದ ಜಂಬೂಸವಾರಿ, ಪಂಜಿನ ಕವಾಯತು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದೂರದರ್ಶನದಲ್ಲಿ ಮರುಪ್ರಸಾರ ಮಾಡಬೇಕು. ಇದರಿಂದ ಜನರಿಗೆ ದಸರಾ ನೆನಪು ಮರುಕಳಿಸಿದಂತಾಗುತ್ತದೆ.

-ಎಸ್. ಉಷಾ ಪ್ರಕಾಶ್,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT