ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ರಾಜಕೀಯ ಹಕ್ಕು ದೊರಕಲಿ

ಅಕ್ಷರ ಗಾತ್ರ

ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ, ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಗಳಲ್ಲಿ ಸರ್ಕಾರಿ ನೌಕರರು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿರುವ ಬಗ್ಗೆ ಪ್ರೊ. ಮಲ್ಲಿಕಾರ್ಜುನ ಕಲಮರಹಳ್ಳಿ ಆತಂಕ ವ್ಯಕ್ತ‌ಪಡಿಸಿದ್ದಾರೆ (ವಾ.ವಾ., ಅ. 17). ನಾಗರಿಕ ಸೇವಾ ನಿಯಮಗಳಲ್ಲಿ ಇದಕ್ಕೆ ಅವಕಾಶವಿಲ್ಲ ಎಂದು ಹೇಳಿದ್ದಾರೆ. ಈ ಹಿಂದೆ ಸರ್ಕಾರಿ ನೌಕರರು ಬರವಣಿಗೆಯಲ್ಲಿ, ಸಿನಿಮಾ, ನಾಟಕಗಳಲ್ಲಿ ತೊಡಗಿಕೊಳ್ಳುವುದಕ್ಕೆ ಅಡ್ಡಿ ಇರಲಿಲ್ಲ. ಅದರಿಂದ ಬಂದ ಆದಾಯವನ್ನು ತೋರಿಸಬೇಕಾಗಿತ್ತು. ಆದರೆ ನಂತರ, ಸರ್ಕಾರಿ ನೌಕರರು ಬರವಣಿಗೆಯಲ್ಲಿ ತೊಡಗುವುದು, ಸಿನಿಮಾ, ನಾಟಕಗಳಲ್ಲಿ ಭಾಗವಹಿಸುವುದನ್ನು ನಿರ್ಬಂಧಕ್ಕೆ ಒಳಪಡಿಸಲಾಯಿತು.

ಈ ವಿಷಯದ ಬಗೆಗಿನ ಚರ್ಚೆಯ ಸಂದರ್ಭದಲ್ಲಿ ಪ್ರೊ. ಎಂ.ಡಿ.ನಂಜುಂಡಸ್ವಾಮಿಯವರು, ಸರ್ಕಾರಿ ನೌಕರರು ಅನ್ನುವ ಕಾರಣಕ್ಕೆ ಸಂವಿಧಾನದತ್ತವಾದ ಹಕ್ಕುಗಳನ್ನು ನಿರಾಕರಿಸಲು ಬರುವುದಿಲ್ಲ, ಪೊಲೀಸ್ ಮತ್ತು ರಕ್ಷಣಾ ಇಲಾಖೆ ಮಾತ್ರ ಇದಕ್ಕೆ ಹೊರತು ಎಂದು ಹೇಳಿದ್ದರು. ರೈತ ಸಂಘದ ಪ್ರಕಟಣೆಗಳಲ್ಲಿ ನ್ಯಾಯಾಲಯದ ಮೂರು
ಪ್ರಕರಣಗಳನ್ನು ಉದ್ಧರಿಸಲಾಗಿತ್ತು. ಕಳ್ಳತನದಲ್ಲಿ ಪ್ರಚಾರ ಮಾಡುವುದಕ್ಕಿಂತ ನಾಗರಿಕ ಸೇವಾ ನಿಯಮಗಳನ್ನು ಪ್ರಶ್ನಿಸಿ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ರಾಜಕೀಯ ಹಕ್ಕನ್ನು ಪಡೆದುಕೊಳ್ಳುವುದು ವಿಹಿತ.

ಕೆ.ವೆಂಕಟರಾಜು,ಚಾಮರಾಜನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT