ದೊ(ದ)ಡ್ಡ ಗುಣ!

7

ದೊ(ದ)ಡ್ಡ ಗುಣ!

Published:
Updated:

‘ಧರ್ಮಸಿಂಗ್‌ ಅವರು ಅಧಿಕಾರ ಕಳೆದುಕೊಳ್ಳಲು ನಾನು ಮಾಡಿದ ತಪ್ಪು ಕಾರಣ’ ಎಂದು ಹೇಳಿದ್ದ ಕುಮಾರ ಸ್ವಾಮಿಯರ ಹೇಳಿಕೆಯನ್ನು ‘ದೊಡ್ಡಗುಣ’ ಎಂದು ಪ್ರೊ. ಶಿವರಾಮಯ್ಯ ಬಣ್ಣಿಸಿದ್ದಾರೆ (ವಾ.ವಾ., ಆ.1). ಅವರ ವಾದವನ್ನು ಓದಿ ನಗುವುದೋ ಅಳುವುದೋ ತಿಳಿಯಲಿಲ್ಲ. ಗಾಂಧೀಜಿ ಬಾಲಕನಾಗಿದ್ದಾಗ ಮಾಡಿದ್ದ ತಪ್ಪು ಮತ್ತು ಆನಂತರ ಅವರು ತಿದ್ದಿಕೊಂಡ ರೀತಿಯನ್ನು ಕುಮಾರಸ್ವಾಮಿ ಅವರ ತಪ್ಪೊಪ್ಪಿಗೆ ಘಟನೆಗೆ ಸಮೀಕರಿಸಿ ಬರೆಯುವುದು ಎಷ್ಟು ಸರಿ?

ಅಧಿಕಾರ ಪಡೆಯುವುದಕ್ಕಾಗಿ ಮಾತ್ರವಲ್ಲ, ಅಧಿಕಾರ ಪಡೆದ ನಂತರವೂ ಕುಮಾರಸ್ವಾಮಿ ಅವರು ತಪ್ಪುಗಳನ್ನು ಮಾಡುತ್ತಲೇ ಇರುತ್ತಾರೆ. ಆದ್ದರಿಂದ ಮುಂದಿನ ವರ್ಷಗಳಲ್ಲಿ ಅವರು ಇನ್ನಷ್ಟು ಪಶ್ಚಾತ್ತಾ‍ಪ ವ್ಯಕ್ತಪಡಿಸಬಹುದು.  ಪ್ರತಿ ಬಾರಿಯೂ ಅವರನ್ನು ಗಾಂಧಿಗೆ ಹೋಲಿಸಲು ಅಥವಾ  ‘ದೊಡ್ಡಗುಣ’ ಎಂದು ಹೇಳುತ್ತಲೇ ಇರಲು ಸಾಧ್ಯವೇ? ಏರಿದ ಏಣಿಯನ್ನೇ ಒದೆಯುವ ರಾಜಕಾರಣಿ ಎಲ್ಲಿ, ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ ಗಾಂಧೀಜಿ ಎಲ್ಲಿ. ನಮ್ಮ ಬಹುಪಾಲು ರಾಜಕಾರಣಿಗಳಿಗೆ ತಪ್ಪು ಮಾಡುವುದು ಹವ್ಯಾಸ. ಅವರಲ್ಲಿ ಹೆಚ್ಚಿನವರು ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲದ ಕಾರಣ ಅವರೆಲ್ಲ ಮೆಚ್ಚುಗೆಗೆ ಅರ್ಹರಲ್ಲವೆಂದು ಭಾವಿಸೋಣವೇ?
ನೀಲಾಂಬಿಕೆ, ಬೆಂಗಳೂರು
 

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !