ಶುಕ್ರವಾರ, ಜುಲೈ 30, 2021
23 °C

ವಾಚಕರ ವಾಣಿ | ಮರು ಮೌಲ್ಯಮಾಪನ: ಶುಲ್ಕದ ಹೊರೆಯೇಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಪದವಿಪೂರ್ವ ಶಿಕ್ಷಣ ಇಲಾಖೆಯು ಒಂದು ವಿಷಯದ ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿಗೆ ಮತ್ತು ಪ್ರತೀ ವಿಷಯದ ಮರು ಮೌಲ್ಯಮಾಪನಕ್ಕೆ ಕ್ರಮವಾಗಿ ₹ 530 ಮತ್ತು ₹ 1,670 ಶುಲ್ಕ ನಿಗದಿ ಮಾಡಿದೆ. ಅಲ್ಲದೆ, ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಸ್ಕ್ಯಾನ್ ಪ್ರತಿ ಪಡೆಯುವುದನ್ನು ಕಡ್ಡಾಯ ಮಾಡಿದೆ. ಅಂದರೆ, ವಿದ್ಯಾರ್ಥಿಯೊಬ್ಬ ಒಂದು ವಿಷಯದ ಮರು ಮೌಲ್ಯಮಾಪನ ಮಾಡಿಸಲು ₹ 2,200 ತೆರಬೇಕು.

ಮೌಲ್ಯಮಾಪಕ ಮಾಡಿರಬಹುದಾದ ತಪ್ಪಿಗೆ ವಿದ್ಯಾರ್ಥಿ ದಂಡ ಕಟ್ಟುವುದು ಯಾವ ನ್ಯಾಯ? ಮೇಲಾಗಿ ಕೊರೊನಾ ಸೋಂಕಿನ ಈ ಸಂಕಷ್ಟದ ಕಾಲದಲ್ಲಿ ಜನ ದುಡಿಮೆಯಿಲ್ಲದೆ ಪರಿತಪಿಸುತ್ತಿದ್ದಾರೆ. ಹೀಗಿರುವಾಗ ಇಷ್ಟು ದೊಡ್ಡ ಮೊತ್ತದ ಶುಲ್ಕ ಭರಿಸುವುದು ಬಡವರಿಗೆ ಕಷ್ಟ. ಇಲಾಖೆಯು ಈ ಬಗ್ಗೆ ಗಮನಹರಿಸಿ ಶುಲ್ಕವನ್ನು ಅರ್ಧದಷ್ಟಾದರೂ ಕಡಿಮೆ ಮಾಡಿ, ವಿದ್ಯಾರ್ಥಿ ಹಾಗೂ ಪೋಷಕರಿಗೆ ನೆರವಾಗಬೇಕು.
-ಗುರುರಾಜ್ ಕೆ.ಎಚ್., ದಾವಣಗೆರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು