ಬುಧವಾರ, ಜುಲೈ 28, 2021
20 °C

ಅಮಾನವೀಯ, ದುರಂತಮಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆದಿವಾಸಿಗಳಿಗೆ ‘ಜಲ್, ಜಂಗಲ್, ಝಮೀನ್’ (ನೀರು, ಅರಣ್ಯಭೂಮಿ, ವಸತಿ) ಹಕ್ಕು ಮತ್ತು ‘ಸುಳ್ಳು ದೋಷಾರೋಪಗಳನ್ನು ಎದುರಿಸುತ್ತಿರುವ ಲಕ್ಷಾಂತರ ವಿಚಾರಣಾಧೀನ ಕೈದಿಗಳ ಹಕ್ಕು’ಗಳಿಗಾಗಿ ತಮ್ಮ ಇಡೀ ಜೀವನವನ್ನು ಧಾರೆ ಎರೆದಿದ್ದವರು 84 ವರ್ಷದ ಫಾದರ್ ಸ್ಟ್ಯಾನ್‌ ಸ್ವಾಮಿ. ಬಂಧನದಲ್ಲಿದ್ದ ಅವರು, ಪಾರ್ಕಿನ್ಸನ್ಸ್‌ ಕಾಯಿಲೆಯಿಂದ ನರಳುತ್ತಿದ್ದರೂ ಜಾಮೀನಿನಿಂದ ವಂಚಿತರಾಗಿ ನರಳುತ್ತಲೇ ದೇಹತ್ಯಾಗ ಮಾಡಬೇಕಾಗಿ ಬಂದುದು ಅಮಾನವೀಯ ಹಾಗೂ ದುರಂತಮಯ.

ಆಡಳಿತಾರೂಢರು ಆವೇಶಭರಿತರಾಗಿ ನಡೆಸುತ್ತಿರುವ ದ್ವೇಷಪೂರ್ಣ ಆಡಳಿತದ ವೈಖರಿಗೆ ಸ್ವಾಮಿಯವರ ಸಾವು ಒಂದು ನಿದರ್ಶನ. ಹೀಗೆ ನ್ಯಾಯ ಕುರುಡಾದರೆ, ಜನ ಕಿವುಡಾದರೆ, ಆಡಳಿತದ ದುಷ್ಟ ಕಪಿಮುಷ್ಟಿಯಿಂದ ದೇಶಕ್ಕೆಂದು ಮುಕ್ತಿ?

-ಕೆ.ಎನ್.ಭಗವಾನ್, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು