ನೆರವಿಗೆ ಮನವಿ

7

ನೆರವಿಗೆ ಮನವಿ

Published:
Updated:

ಕ್ಯಾನ್ಸರ್‌ನಿಂದ ಬಳಲುತ್ತಿರುವ ನನಗೆ ಬೋನ್‌ ಮ್ಯಾರೊ ಚಿಕಿತ್ಸೆ ಮಾಡಿಸುವುದು ಅಗತ್ಯ ಎಂದು ವೈದ್ಯರು ಹೇಳಿದ್ದಾರೆ. ಈಗಾಗಲೇ ನಾನು ಕಿಮೊಥೆರಪಿಗೆ ಒಳಗಾಗಿದ್ದು, ಅದಕ್ಕಾಗಿ ₹ 3 ಲಕ್ಷ ಸಾಲ ಮಾಡಿದ್ದೇನೆ. ಅನುದಾನಿತ ಶಾಲೆಯಲ್ಲಿ ಶಿಕ್ಷಕರಾಗಿರುವ ನನ್ನ ಪತಿಯ ವೇತನದಿಂದ ಮನೆ ನಡೆಸುವುದೂ ಕಷ್ಟವಾಗಿದೆ. ನಮಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ.

ಬೋನ್‌ ಮ್ಯಾರೊ ಚಿಕಿತ್ಸೆಗೆ ಸುಮಾರು ₹ 18 ಲಕ್ಷ ವೆಚ್ಚ ಬರಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಅಷ್ಟೊಂದು ವೆಚ್ಚ ಭರಿಸುವ ಆರ್ಥಿಕ ಶಕ್ತಿ ನಮಗೆ ಇಲ್ಲದಿರುವುದರಿಂದ ನೆರವಿಗಾಗಿ ಈ ಮನವಿ.

ನನ್ನ ಬ್ಯಾಂಕ್‌ ಖಾತೆಯ ವಿವರ: ಶ್ರೀಲಕ್ಷ್ಮಿ ಬಿ.ಎಲ್‌., ಖಾತೆ ಸಂಖ್ಯೆ: 64145728472, IFSC SBIN0040946. ದೂರವಾಣಿ: 8296317642

ಶ್ರೀಲಕ್ಷ್ಮಿ ಬಿ.ಎಲ್‌, ದಾವಣಗೆರೆ

***

ಗೋಶಾಲೆ ಆರಂಭಿಸಿ

ವಿಜಯಪುರ ಜಿಲ್ಲೆಯಲ್ಲಿ ಭೀಕರ ಬರ ಆವರಿಸಿದ್ದು, ಕುಡಿಯುವ ನೀರಿಗೂ ತತ್ವಾರವಾಗಿದೆ. ಗೋವುಗಳಿಗೆ ಮೇವು, ನೀರಿನ ಕೊರತೆಯಾಗಿದೆ. ಮೇವು ಖರೀದಿಗೆ ಹಣವೂ ಇಲ್ಲದೆ, ರೈತರು ಗೋವುಗಳನ್ನು ಸಂರಕ್ಷಿಸಿಕೊಳ್ಳಲಾಗದೆ ಕಸಾಯಿಖಾನೆಗೆ ದೂಡುವಂತಾಗಿದೆ.

ಸಂಬಂಧಪಟ್ಟ ಸಚಿವರು, ಅಧಿಕಾರಿಗಳು ಆದಷ್ಟು ಬೇಗ ಜಿಲ್ಲೆಯಲ್ಲಿ ಗೋಶಾಲೆಗಳನ್ನು ಆರಂಭಿಸಿ ಜಾನುವಾರುಗಳ ಪ್ರಾಣ ಉಳಿಸಬೇಕು.

ಮುತ್ತು ಕುಂಟೋಜಿ, ಹುಣಶ್ಯಾಳ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !