ಸೋಮವಾರ, ಆಗಸ್ಟ್ 15, 2022
24 °C

ಫಲಾನುಭವಿಗೆ ದಕ್ಕಬೇಕು ಮೀಸಲಾತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಳಮೀಸಲಾತಿ ಬೇಕೋ ಬೇಡವೋ ಎಂಬ ಚರ್ಚೆ ಈಗ ಮುನ್ನೆಲೆಗೆ ಬಂದಿದೆ. ಇದಕ್ಕೆ ಪೂರಕವಾಗಿ ಬಲಗೈ ಮತ್ತು ಎಡಗೈ ಗುಂಪಿನ ಬೆಂಬಲಿಗರು ತಮ್ಮ ಅನುಕೂಲಕ್ಕೆ ತಕ್ಕಂತೆ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ದುರದೃಷ್ಟದ ಸಂಗತಿ ಎಂದರೆ, ಸಮಾಜದಲ್ಲಿ ಮೀಸಲಾತಿಯನ್ನು ನಿಜವಾದ ಅರ್ಹರಿಗೆ ತಲುಪಿಸಿ, ಅವರನ್ನು ಸಬಲೀಕರಿಸಿ, ಮೀಸಲಾತಿಮುಕ್ತ ಸಮಸಮಾಜ ನಿರ್ಮಿಸುವುದರ ಬದಲು ಮೀಸಲಾತಿ ಹೆಚ್ಚಿಸಬೇಕೋ ಅಥವಾ ಒಳಮೀಸಲಾತಿ ನೀಡಬೇಕೋ ಎಂಬ ಚರ್ಚೆಗಳು ಮುನ್ನೆಲೆಗೆ ಬರುತ್ತಿವೆ.

ಮೀಸಲಾತಿ ಸೌಲಭ್ಯವನ್ನು ನಿಜವಾದ ಅರ್ಹರಿಗೆ ತಲುಪಿಸದೆ ಎಷ್ಟು ವಿಧದ ಮೀಸಲಾತಿ ಜಾರಿಗೆ ತಂದರೂ ಉಪಯೋಗವಿಲ್ಲ. ಸರ್ಕಾರ ಇದನ್ನು ಮೊದಲು ಅರ್ಥಮಾಡಿಕೊಂಡು, ಅರ್ಹರಿಗೆ ಅದು ಸಿಗುವಂತೆ ನೋಡಿಕೊಳ್ಳಬೇಕು.

–ವೀರಪ್ಪ ತಿಪ್ಪಣ್ಣ ಈಟಿ, ಧಾರವಾಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು