ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಮೇಲೆ ಅನವಶ್ಯಕ ಒತ್ತಡ

Last Updated 10 ಫೆಬ್ರುವರಿ 2021, 20:22 IST
ಅಕ್ಷರ ಗಾತ್ರ

ವಿವಿಧ ಸಮುದಾಯಗಳು ತಮ್ಮ ತಮ್ಮ ಹಿತಾಸಕ್ತಿಗೆ ಅನುಗುಣವಾಗಿ ಮೀಸಲಾತಿ ಕೋರುತ್ತಿರುವುದು, ಅವುಗಳಿಗೆ ಸಂಬಂಧಿಸಿದ ಸಭೆ, ಸಮಾರಂಭಗಳಲ್ಲಿ ಶಾಸಕರು, ಮಂತ್ರಿಗಳು, ಮುಖ್ಯಮಂತ್ರಿ ಭಾಗವಹಿಸಿ, ಹೋರಾಟಗಾರರ ಅಹವಾಲು ಸ್ವೀಕರಿಸಿ ಭರವಸೆ ನೀಡುವುದು ನಡೆಯುತ್ತಿದೆ. ಮೀಸಲಾತಿಯು ಅಶಕ್ತರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಮೆಟ್ಟಿಲು ಇದ್ದಂತೆ. ಅದು, ಶಕ್ತ ಸಮಾಜದ ನಿರ್ಮಾಣಕ್ಕೆ ಊರುಗೋಲು ಆಗಬೇಕಿದೆ. ಮೀಸಲಾತಿಯ ಮೂಲಕ ಶಕ್ತರಾಗಿರುವವರು ಅದೇ ಸಮುದಾಯದ ಅಶಕ್ತರನ್ನು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಹಾಗೂ ಬೌದ್ಧಿಕವಾಗಿ ಮೇಲೆತ್ತುವ ಕಾರ್ಯಗಳಲ್ಲಿ ತೊಡಗಬೇಕಿದೆ. ತರ್ಕ, ವಿವೇಚನೆ ಇಲ್ಲದೆಸರ್ಕಾರದ ಮೇಲೆ ಅನವಶ್ಯಕವಾಗಿ ಒತ್ತಡ ಹೇರುವುದು ತರವಲ್ಲ.

- ಎಂ. ಮಂಚಶೆಟ್ಟಿ,ಕಡಿಲುವಾಗಿಲು, ಮದ್ದೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT