ಶನಿವಾರ, ನವೆಂಬರ್ 23, 2019
17 °C

ಸಸಿಕಾಂತ್ ಸೆಂಥಿಲ್ ರಾಜೀನಾಮೆ: ಮೌಲ್ಯಗಳಿಗೆ ಧಕ್ಕೆ ತರುವುದು ಬೇಡ

Published:
Updated:

ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಅವರು ‘ಪ್ರಜಾಪ್ರಭುತ್ವದ ಆಶಯಗಳಿಗೆ ಅಪಾಯ ಎದುರಾಗಿದೆ’ ಎಂಬ ಕಾರಣ ನೀಡಿ ಭಾರತೀಯ ಆಡಳಿತ ಸೇವೆಗೆ ರಾಜೀನಾಮೆ ನೀಡಿರುವುದನ್ನು ತಿಳಿದು(ಪ್ರ.ವಾ., ಸೆ.7) ಆತಂಕವಾಯಿತು. ತನ್ನ ಹುದ್ದೆಗಿಂತ ತಾನು ನಂಬಿದಂತಹ ತತ್ವ, ಸಿದ್ಧಾಂತಗಳಿಗೆ ಧಕ್ಕೆಯಾಗಬಾರದೆಂಬ ಸೆಂಥಿಲ್ ಅವರ ಕಳಕಳಿ ಪ್ರಶಂಸನೀಯ. ತಾವು ನಂಬಿದ ಮೌಲ್ಯಗಳಿಗೆ ಹಾಗೂ ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆ ಒದಗುವ ಸ್ಥಿತಿ ಎದುರಾಗಿದೆ ಎಂದು ಅಧಿಕಾರಿಗಳು ಸಾಲು ಸಾಲಾಗಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಯಾವುದೇ ಪಕ್ಷದ ನೇತೃತ್ವದ ಸರ್ಕಾರ ಇದ್ದರೂ ಈ ನೆಲದ ಮಾನವೀಯ ಮೌಲ್ಯಗಳಿಗೆ ಧಕ್ಕೆ ಆಗಬಾರದು.

-ಸಚಿನ್ ಕೆ.ಸಿ., ಕಡೂರು

ಪ್ರತಿಕ್ರಿಯಿಸಿ (+)