ರೆಸಾರ್ಟ್‌ನಲ್ಲಿ ಹೊಯ್‌ಕೈ!

7

ರೆಸಾರ್ಟ್‌ನಲ್ಲಿ ಹೊಯ್‌ಕೈ!

Published:
Updated:

ವಿಧಾನಸಭೆ ಈ ನಾಡಿನ ಪರಮೋಚ್ಚ ವೇದಿಕೆ. ಅಲ್ಲಿ ನಮ್ಮ ಶಾಸಕರ ಒಂದೊಂದು ಮಾತಿನಲ್ಲೂ ಲಕ್ಷಾಂತರ ಪ್ರಜೆಗಳ ಧ್ವನಿ ಇದೆ. ಪ್ರಜೆಗಳಿಗೆ, ನಾಡಿಗೆ ಮಾದರಿಯಾಗಿ ಇರಬೇಕಾದುದು ಜನಪ್ರತಿನಿಧಿಗಳ ನೈತಿಕ ಕರ್ತವ್ಯ ಕೂಡ. ಹೀಗಿರುವಾಗ, ಒಂದಿಬ್ಬರು ಶಾಸಕರು ರೆಸಾರ್ಟ್‌ನಲ್ಲಿ ಹೊಡೆದಾಡಿಕೊಂಡಿದ್ದಾರೆ ಎನ್ನಲಾದ ವಿಷಯ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿರುವವರಿಗೆ ನೋವನ್ನು ಉಂಟುಮಾಡಿದೆ.

ಇವರು ಗುದ್ದಾಡಿದ್ದು ನಾಡಿನ ಅಭಿವೃದ್ಧಿಯ ವಿಷಯಕ್ಕಾಗಿದ್ದರೆ ಅರಗಿಸಿಕೊಳ್ಳಬಹುದಿತ್ತು. ಆದರೆ, ಅವರ ಈ ವರ್ತನೆಯ ಹಿಂದೆ ರಾಜಕೀಯ ಸ್ವಾರ್ಥ ಅಡಗಿದೆ. ದೇಶದ ರಾಜಕೀಯ ವಿದ್ಯಮಾನವನ್ನು ಗಮನಿಸಿದರೆ, ಎಲ್ಲ ರಾಜಕೀಯ ಪಕ್ಷಗಳೂ ಆಗಾಗ್ಗೆ ಇಂತಹ ಘಟನೆಗಳಿಗೆ ಸಾಕ್ಷಿಯಾಗುತ್ತಿರುವುದು ದುರದೃಷ್ಟಕರ.

ಬೀರಣ್ಣ ನಾಯಕ ಮೊಗಟಾ, ಯಲ್ಲಾಪುರ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !