ಹಿರಿಯ ಕ್ರೀಡಾಪಟುಗಳನ್ನು ಗೌರವಿಸಿ

7

ಹಿರಿಯ ಕ್ರೀಡಾಪಟುಗಳನ್ನು ಗೌರವಿಸಿ

Published:
Updated:

ನಮ್ಮ ಕ್ರೀಡಾನೀತಿಯು ಎಲ್ಲರಿಗೂ ಒಂದೇ ತೆರನಾಗಿಲ್ಲ. ಹಿರಿಯರ ಕ್ರೀಡಾಕೂಟಗಳನ್ನು ನಮ್ಮಲ್ಲಿ ನಿರ್ಲಕ್ಷಿಸಲಾಗಿದೆ. ಹಿರಿಯ ಕ್ರೀಡಾಪಟುಗಳಿಗಾಗಿ ರಾಜ್ಯದಲ್ಲಿ ಮಾಸ್ಟರ್ಸ್‌ ಅಥ್ಲೆಟಿಕ್ಸ್ ಮತ್ತು ರಾಷ್ಟ್ರಮಟ್ಟದಲ್ಲಿ ಮಾಸ್ಟರ್ಸ್ ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ (MAFI) ಅಸ್ತಿತ್ವದಲ್ಲಿವೆ. ಇವು ಆಯೋಜಿಸುವ ಕ್ರೀಡಾಕೂಟಗಳಲ್ಲಿ ತೊಂಬತ್ತು ವರ್ಷದ ಮುದುಕರೂ ಭಾಗವಹಿಸಿ ಸಾಧನೆ ಮಾಡಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ ಗೆದ್ದವರಿದ್ದಾರೆ.

ಆದರೆ ಇಂಥ ಕ್ರೀಡಾಪಟುಗಳು, ಕ್ರೀಡಾಕೂಟಗಳು ನಡೆಯುವ ಊರಿಗೆ ಹೋಗಲು ವಾಹನ ವೆಚ್ಚಕ್ಕೂ ಇನ್ನೊಬ್ಬರನ್ನು ಆಶ್ರಯಿಸಬೇಕಾಗಿದೆ. ಎಲ್ಲಿಂದಲೂ ಇವರಿಗೆನೆರವು ಸಿಗುವುದಿಲ್ಲ. ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದಂಥ ಅನೇಕರು ಆರ್ಥಿಕ ಮುಗ್ಗಟ್ಟಿನಿಂದ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಲಾಗದೆ ಕೈಚೆಲ್ಲಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಇತರ ಕ್ರೀಡಾಪಟುಗಳಿಗೆ ಲಕ್ಷಗಟ್ಟಲೆ ಹಣ ನೀಡುವುದು ಸಾಮಾನ್ಯ. ಹಾಗಿದ್ದರೆ ಹಿರಿಯರ ಸಾಧನೆಗೆ ಬೆಲೆಯಿಲ್ಲವೇ? ಎಲ್ಲ ಕ್ರೀಡಾಪಟುಗಳನ್ನೂ ಪ್ರೋತ್ಸಾಹಿಸುವ, ಏಕರೂಪದ ಕಾಯ್ದೆಯನ್ನು ರೂ‍ಪಿಸಲು ಸಂಬಂಧಪಟ್ಟವರು ಮುಂದಾಗಬೇಕು.

-ಎಂ. ವೆಂಕಟಪ್ಪ, ಬೆಂಗಳೂರು

 

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !