ಮಾಧ್ಯಮಗಳೇ ಎಡವಿದರೆ?

7

ಮಾಧ್ಯಮಗಳೇ ಎಡವಿದರೆ?

Published:
Updated:

ಸಾಮಾಜಿಕ ಜಾಲತಾಣಗಳು ಮಾಹಿತಿ ಕೊಡುವುದಕ್ಕಿಂತ ಹೆಚ್ಚಾಗಿ ಸುಳ್ಳು ಸುದ್ದಿಗಳ ಭಂಡಾರಗಳಂತಾಗಿವೆ. ಇಲ್ಲಿ ಬರುವ ಮಾಹಿತಿಯನ್ನು ನಿಜವೆಂದು ನಂಬಿ ಮತ್ತಷ್ಟು ಪ್ರಚಾರ ಮಾಡುವವರ ಸಂಖ್ಯೆ ಕಡಿಮೆಯೇನಿಲ್ಲ. ನಿಖರ ಸುದ್ದಿಗಳನ್ನೇ ಕೊಡಬೇಕಾದ ಜವಾಬ್ದಾರಿ ಇರುವ ಮಾಧ್ಯಮಗಳೇ ಎಡವಿದರೆ?

ಅಟಲ್‌ ಬಿಹಾರಿ ವಾಜಪೇಯಿ ಅವರು ಸಂಜೆ 5.05ಕ್ಕೆ ನಿಧನ ಹೊಂದಿದ್ದಾಗಿ ಅವರಿಗೆ ಚಿಕಿತ್ಸೆ ಕೊಡುತ್ತಿದ್ದ ವೈದ್ಯರು ಗುರುವಾರ ಸಂಜೆ ಘೋಷಿಸಿದ್ದರು. ಆದರೆ ಕೆಲವು ಸುದ್ದಿ ವಾಹಿನಿಗಳು ಮಧ್ಯಾಹ್ನ 2.30ಕ್ಕೇ ವಾಜಪೇಯಿ ಅವರ ನಿಧನದ ಸುದ್ದಿಯನ್ನು ಬಿತ್ತರಿಸಿದ್ದವು.

ಅತ್ಯಂತ ಎಚ್ಚರದಿಂದ ಕಾರ್ಯನಿರ್ವಹಿಸಬೇಕಾದ ಮಾಧ್ಯಮಗಳೇ ಸುಳ್ಳುಸುದ್ದಿಯನ್ನು ಪ್ರಸಾರ ಮಾಡಿದರೆ ಜನರು ಯಾರನ್ನು ನಂಬಬೇಕು? ಮಾಧ್ಯಮಗಳು ಇನ್ನಷ್ಟು ಜವಾಬ್ದಾರಿಯುತವಾಗಿ ವರ್ತಿಸುವುದು ಅಗತ್ಯ.

 

ಬರಹ ಇಷ್ಟವಾಯಿತೆ?

 • 9

  Happy
 • 1

  Amused
 • 2

  Sad
 • 1

  Frustrated
 • 1

  Angry

Comments:

0 comments

Write the first review for this !