ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜವಾಬ್ದಾರಿ ಅರಿಯಿರಿ

Last Updated 15 ಫೆಬ್ರುವರಿ 2019, 18:26 IST
ಅಕ್ಷರ ಗಾತ್ರ

ಆಡಳಿತ ಮತ್ತು ಪ್ರತಿಪಕ್ಷದ ನಾಯಕರೇ, ನಮಗೆ ನಮ್ಮ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚೆಗಳು ನಡೆಯಬೇಕೆಂಬ ಬಯಕೆ ಇದೆ.ನಮ್ಮ ನೋವಿಗೆ ಮುಲಾಮು ಹಚ್ಚುವ ರೀತಿಯಲ್ಲಿ ಕಲಾಪ ನಡೆಯುತ್ತದೆ ಎಂಬ ನಿರೀಕ್ಷೆ ಇದೆ.ಆದರೆ ಈ ನಿರೀಕ್ಷೆ ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ಹುಸಿಯಾಗಿದೆ.

ನಿಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ್ದು ನಮ್ಮ ಸಮಸ್ಯೆ,ಸವಾಲುಗಳನ್ನು ಪರಿಹರಿಸಲಿಕ್ಕೇ ಹೊರತು, ನಿಮ್ಮ ಸ್ವಾರ್ಥಕ್ಕಾಗಿ, ಅಧಿಕಾರ ಲಾಲಸೆಗಾಗಿ ಗದ್ದಲ,ಕೋಲಾಹಲ ಎಬ್ಬಿಸುತ್ತಾ ಸದನದ ಅಮೂಲ್ಯ ಸಮಯವನ್ನು ಹಾಳುಗೆಡಹುವುದಕ್ಕಲ್ಲ.ರಾಜ್ಯದ ಎಷ್ಟೋ ಸಮಸ್ಯೆ
ಗಳನ್ನು ಪರಿಹರಿಸುವ ಜವಾಬ್ದಾರಿ ನಿಮ್ಮಗಳ ಮೇಲಿದೆ ಸ್ವಾಮಿ.ನಮಗೆ ಬೇಕಿರುವುದು ನಿಮ್ಮ ಧರಣಿ,ಪ್ರತಿಭಟನೆ, ಸಭಾತ್ಯಾಗವಲ್ಲ. ನಮ್ಮ ಸಂಕಷ್ಟಗಳಿಗೆ ಸ್ಪಂದಿಸುವ ವಿಚಾರಯೋಗ್ಯ ಚರ್ಚೆಯ ಕಲಾಪ. ಇದನ್ನೆಲ್ಲಾ ನೀವು ಗಮನದಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು.

ವಸಂತ ಬಿ. ಈಶ್ವರಗೆರೆ, ಹೂವಿನಹೊಳೆ, ಹಿರಿಯೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT